ಮೂರು ಎಟಿಎಂಗಳನ್ನು ಒಡೆದು 42ಲಕ್ಷ ರೂ. ದೋಚಿದ ಕಳ್ಳರು

Update: 2021-12-11 17:05 GMT
File Photo: PTI

ಶಿವಪುರಿ,ಡಿ.12: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಕಳ್ಳರ ಗುಂಪೊಂದು ಗ್ಯಾಸ್ಕಟ್ಟರ್ಗಳನ್ನು ಬಳಸಿ ಮೂರು ಎಟಿಎಂಗಳನ್ನು ಒಡೆದುಹಾಕಿ, 42 ಲಕ್ಷ ರೂ.ಗೂ ಅಧಿಕ ಹಣವನ್ನು ದೋಚಿದೆ. ದರೋಡೆಕೋರರು ಎಟಿಎಂ ಕೊಠಡಿಗಳಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಪೇಂಟ್ ಸಿಂಪಡಿಸಿದ್ದಾರೆಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ಹಾಗೂ ಶನಿವಾರದ ನಡುವಿನ ರಾತ್ರಿಗಳಲ್ಲಿ ಶಿವಪುರಿ ನಗರದ ಮೂರು ವಿಭಿನ್ನ ಎಟಿಎಂ ಕೇಂದ್ರಗಳಲ್ಲಿ ಈ ದರೋಡೆ ನಡೆದಿದೆ ಎಂದು ವಿಭಾಗೀಯ ಪೊಲೀಸ್ ಅಧಿಕಾರಿ ಅಜಯ್ ಭಾರ್ಗವ್ ತಿಳಿಸಿದ್ದಾರೆ.

ಶಿವಪುರಿ ನಗರದ ಗ್ವಾಲಿಯರ್ ಬೈಪಾಸ್ನಲ್ಲಿರುವ ಭಾರತೀಯ ಸ್ಟೇಟ್ಬ್ಯಾಂಕ್ನಿಂದ ಕನಿಷ್ಠ 19.26 ಲಕ್ಷ ರೂ ಹಣವನ್ನು ದೋಚಲಾಗಿದೆ. ಅಲ್ಲಿಂದ ಅರ್ಧ ಕಿ.ಮೀ. ದೂರದಲ್ಲಿರುವ ಇನ್ನೊಂದು ಎಸ್ಬಿಐ ಎಟಿಎಂನಿಂದ ಆರೋಪಿಗಳು 22.89 ಲಕ್ಷ ರೂ. ಅಪಹರಿಸಿದ್ದಾರೆಂದು ಎಸ್ಡಿಓಪಿ ತಿಳಿಸಿದ್ದಾರೆ.

ಕಳ್ಳರು ಆ್ಯಕ್ಸಿಸ್ ಬ್ಯಾಂಕ್ನ ಎಟಿಎಂಗೂ ಕನ್ನ ಹಾಕಿದ್ದರಾದರೂ, ಅಲ್ಲಿ ಅವರಿಗೆ ನಗದನ್ನು ತೆಗೆಯಲು ಸಾಧ್ಯವಾಗಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಆಸುಪಾಸಿನಲ್ಲಿರುವ ಸಿಸಿಟಿವಿಗಳನ್ನು ಅಂದು ಅಜಯ್ ಭಾರ್ಗವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News