ಮಥುರಾ: ಸಂಘಪರಿವಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತೀಯ ತೀರ್ಥ ಪುರೋಹಿತ್ ಮಹಾಸಭಾ ಒತ್ತಾಯ

Update: 2021-12-12 17:26 GMT
ಸಾಂದರ್ಭಿಕ ಚಿತ್ರ (PTI)

ಮಥುರಾ: ಇಲ್ಲಿನ ಶಾಹಿ ಈದ್ಗಾ ಮಸೀದಿಯೊಳಗೆ ಕೃಷ್ಣ ವಿಗ್ರಹ ಪ್ರತಿಷ್ಠಾಪನೆಗೆ ಆಗ್ರಹಿಸಿ ಡಿಸೆಂಬರ್ 6 ರಂದು ಘೋಷಣೆಗಳನ್ನು ಕೂಗಿದ್ದ ಸಂಘಪರಿವಾರ ಗುಂಪುಗಳ ವಿರುದ್ಧ ಉತ್ತರ ಪ್ರದೇಶ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತೀಯ ತೀರ್ಥ ಪುರೋಹಿತ್ ಮಹಾಸಭಾ ರವಿವಾರ ಆಗ್ರಹಿಸಿದೆ.

ಈ ಮಸೀದಿಯು ಶ್ರೀಕೃಷ್ಣ ಜನ್ಮಸ್ಥಾನದ ಪಕ್ಕದಲ್ಲಿದೆ.

ಮಸೀದಿಯ ಒಳಗೆ ಹಾಗೂ  ಹೊರಗೆ ಹೊಸ ಕಾರ್ಯಕ್ರಮವನ್ನು ಆರಂಭಿಸಲು ಪ್ರಯತ್ನಿಸುತ್ತಿರುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತೀಯ ತೀರ್ಥ ಪುರೋಹಿತ್ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಪಾಠಕ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಇದು ಮಥುರಾದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಏಕೆಂದರೆ ದೇವಾಲಯದ ಪಟ್ಟಣಕ್ಕೆ ಯಾತ್ರಿಕರು ಹಾಗೂ  ಭಕ್ತರ ಆಗಮನದ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು.

ಈ ವಿವಾದ ವಿಚಾರಣೆಯಲ್ಲಿದ್ದು, ನ್ಯಾಯಾಲಯವು ಈ ವಿಷಯದ ಬಗ್ಗೆ ತೀರ್ಮಾನಿಸಬೇಕಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News