ರೂ. 36,230 ಕೋಟಿ ವೆಚ್ಚದ ಗಂಗಾ ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ಶಂಕುಸ್ಥಾಪನೆ

Update: 2021-12-18 17:38 GMT
photo:PTI

ಶಾಹಜಹಾನ್‌ಪುರ(ಉ.ಪ್ರ),ಡಿ.18: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉತ್ತರ ಪ್ರದೇಶದ ಶಾಹಜಹಾನ್‌ಪುರದಲ್ಲಿ  594 ಕಿ.ಮೀ.ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಶಿಲಾನ್ಯಾಸವನ್ನು ನೆರವೇರಿಸಿದರು.

ಮೀರತ್‌ನ  ಬಿಜೌಲಿ ಗ್ರಾಮದಿಂದ ಆರಂಭಗೊಳ್ಳುವ ಎಕ್ಸ್‌ಪ್ರೆಸ್‌ವೇ  ಪ್ರಯಾಗರಾಜ್ ಜಿಲ್ಲೆಯ ಜುದಾಪುರ ಡಾಂಡೂ ಗ್ರಾಮದವರೆಗೆ ಚಾಚಿಕೊಳ್ಳಲಿದೆ. 
ಮೀರತ್,ಹಾಪುರ್,ಬುಲಂದಶಹರ್,ಅಮ್ರೋಹಾ,ಶಾಹಜಹಾನ್‌ಪುರ,ಹರ್ದೋಯಿ,ಉನ್ನಾವೊ,ರಾಯಬರೇಲಿ,ಪ್ರತಾಪಗಡ ಮತ್ತು ಪ್ರಯಾಗರಾಜ್ ಜಿಲ್ಲೆಗಳ ಮೂಲಕ ಈ ಎಕ್ಸ್‌ಪ್ರೆಸ್‌ವೇ ಹಾದು ಹೋಗಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಇದು ಉತ್ತರ ಪ್ರದೇಶದ ಅತ್ಯಂತ ಉದ್ದದ ಎಕ್ಸ್‌ಪ್ರೆಸ್‌ವೇ ಆಗಲಿದ್ದು,ರಾಜ್ಯದ ಪಶ್ಚಿಮ ಮತ್ತು ಪೂರ್ವ ಪ್ರದೇಶಗಳನ್ನು ಸಂಪರ್ಕಿಸಲಿದೆ.

ಎಂಟು ಪಥಗಳಿಗೆ ವಿಸ್ತರಿಸಬಹುದಾದ ಈ ಷಟ್ಪಥ ಎಕ್ಸ್‌ಪ್ರೆಸ್‌ವೇ 36,230 ಕೋ.ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News