×
Ad

ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

Update: 2021-12-19 00:27 IST

ಹೊಸದಿಲ್ಲಿ, ಡಿ. 18: ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಹಾರಾಡುತ್ತಿದ್ದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್)ಗುಂಡು ಹಾರಿಸಿ ಹೊಡೆದುರುಳಿಸಿದೆ. ಫಿರೋಝ್ಪುರ ವಲಯದ ವಾನ್ ಗಡಿ ಠಾಣೆಯ ಸಮೀಪ ಶುಕ್ರವಾರ ರಾತ್ರಿ ಸುಮಾರು 11.10ಕ್ಕೆ ಹಾರಾಡುತ್ತಿದ್ದ ಚೀನಾ ನಿರ್ಮಿತ ಡ್ರೋನ್ ಅನ್ನು ಗುಂಡು ಹಾರಿಸಿ ಹೊಡೆದುರುಳಿಸಲಾಗಿದೆ ಎಂದು ಗಡಿ ರಕ್ಷಣಾ ಭದ್ರತಾ ಪಡೆ ಶನಿವಾರ ತಿಳಿಸಿದೆ. ‌

ಈ ಡ್ರೋನ್‌ಗೆ ನಾಲ್ಕು ಬ್ಯಾಟರಿಗಳು ಇವೆ. ಸುಮಾರು 23 ಕಿ.ಗ್ರಾಂ ತೂಕ ಹೊಂದಿರುವ ಈ ಡ್ರೋನ್ 23 ಕಿ.ಗ್ರಾಂ. ಅನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಈ ಡ್ರೋನ್‌ನಲ್ಲಿ ಮಾದಕ ಪದಾರ್ಥ, ಶಸ್ತ್ರಾಸ್ತ್ರ ಅಥವಾ ಸ್ಫೋಟಕ ಪತ್ತೆಯಾಗಿಲ್ಲ ಎಂದು ಅದು ತಿಳಿಸಿದೆ. ಘಟನೆ ನಡೆದ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. 

ಗಡಿ ಭದ್ರತಾ ಪಡೆ ಈ ಹಿಂದೆ ಪಾಕಿಸ್ತಾನ ಮೂಲದ ಹಾಗೂ ಶಸ್ತ್ರಾಸ್ತ್ರ, ಸ್ಫೋಟಕ ಸಾಗಿಸುತ್ತಿದ್ದ ಎರಡು ಡ್ರೋನ್ಗಳನ್ನು ಗುಂಡು ಹಾರಿಸಿ ಹೊಡೆದುರುಳಿಸಿತ್ತು. ಎರಡೂ ಘಟನೆಗಳು ಪಂಜಾಬ್ ನ ಮುಂಚೂಣಿ ಪ್ರದೇಶದಲ್ಲಿ ಸಂಭವಿಸಿದೆ ಎಂದು ಬಿಎಸ್ಎಫ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News