×
Ad

ತೆಲಂಗಾಣದಲ್ಲಿ ಮೊದಲ ಸಲಿಂಗ ವಿವಾಹ !

Update: 2021-12-19 08:52 IST
ಸಾಂದರ್ಭಿಕ ಚಿತ್ರ

ಹೈದರಾಬಾದ್: ಇಲ್ಲಿನ ವಿಕಾರಾಬಾದ್ ಹೈವೆಯ ಟ್ರಾನ್ಸ್ ಗ್ರೀನ್‌ಫೀಲ್ಡ್ ರೆಸಾರ್ಟ್ ನಲ್ಲಿ ತೆಲಂಗಾಣದ ಮೊದಲ ಸಲಿಂಗ ವಿವಾಹ ನಡೆಯಿತು.

ಕಳೆದ ಅಕ್ಟೋಬರ್‌ನಲ್ಲಿ ಈ ಇಬ್ಬರೂ ತಮ್ಮ ವಿವಾಹ ನಿರ್ಧಾರ ಪ್ರಕಟಿಸಿದ್ದರು. ಟಾಲಿವುಡ್ ನಟ ಸಮಂತ ರುತ್ ಪ್ರಭು ಈ ಜೋಡಿಯನ್ನು ಅಭಿನಂದಿಸಿ ಮರು ಟ್ವೀಟ್ ಮಾಡಿದ್ದರು.

ಭಾರತದ ಕಾನೂನು ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದಿಲ್ಲವಾದರೂ, ಎಲ್‌ಜಿಬಿಟಿಕ್ಯೂ ಸಮುದಾಯದ ಸೋಫಿಯಾ ಡೇವಿಡ್ ಈ ಸಮಾರಂಭದ ನೇತೃತ್ವ ವಹಿಸಿದ್ದರು.

ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಎಲ್‌ಜಿಬಿಟಿಕ್ಯೂ ಸಮುದಾಯದ 60 ಮಂದಿ ಪಾಲ್ಗೊಂಡ ಸಮಾರಂಭದಲ್ಲಿ ವಿವಾಹ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News