ಪ್ರತೀಕಾರಕ್ಕಿಳಿದ ಮಂಗಗಳ ಪಡೆ: 3 ತಿಂಗಳ ಅವಧಿಯಲ್ಲಿ 250ಕ್ಕೂ ಹೆಚ್ಚು ನಾಯಿಮರಿಗಳ ಹತ್ಯೆ

Update: 2021-12-19 03:43 GMT
ಸಾಂದರ್ಭಿಕ ಚಿತ್ರ

ಮುಂಬೈ : ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ಅಮಾನುಷ ಘಟನೆಯು ಪ್ರಾಣಿಗಳೂ ಸೇಡು ತೀರಿಸಿಕೊಳ್ಳುತ್ತವೆ ಎಂಬುದನ್ನು ಸಾಬೀತುಪಡಿಸಿದೆ. ಕಳೆದ ಕೆಲವೇ ವಾರಗಳ ಅಂತರದಲ್ಲಿ ಸುಮಾರು 250 ಕ್ಕೂ ಹೆಚ್ಚು ನಾಯಿಮರಿಗಳನ್ನು ಮಂಗಗಳ ಗುಂಪು ಹತ್ಯೆಗೈದಿವೆ.

ಬೀಡ್‌ ಜಿಲ್ಲೆಯ ಮಲಗಾಂವ್‌ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಬೀದಿ ನಾಯಿಗಳ ಗುಂಪೊಂದು ಮಂಗನ ಮರಿಯನ್ನು ಸಾಯಿಸಿ ತಿಂದಿದ್ದವು. ಈ ಘಟನೆ ಬಳಿಕ ಮಂಗಗಳು ನಾಯಿಗಳ ಮೇಲೆ ಹಗೆ ಸಾಧಿಸುತ್ತಿದೆಯೆಂದು ಗ್ರಾಮಸ್ಥರು ಹೇಳುವುದಾಗಿ News18.com ವರದಿ ಮಾಡಿದೆ. 

ಗ್ರಾಮದ ಎಲ್ಲೇ ನಾಯಿಮರಿಗಳು ಇದ್ದರೆ ಅವುಗಳನ್ನು ಎತ್ತರ ಕಟ್ಟಡಗಳಿಗೆ, ಮರಗಳ ಮೇಲೆ ಹೊತ್ತೊಯ್ಯುವ ಮಂಗಗಳ ಗುಂಪು ಮರಿಯನ್ನು ನೆಲಕ್ಕೆ ಎಸೆಯುತ್ತವೆ. ಹೀಗೆ ನೆಲಕ್ಕಪ್ಪಳಿಸಿ ಕಳೆದ ಮೂರು ತಿಂಗಳ ಅವಧಿಯಲ್ಲಿ 250 ಕ್ಕೂ ಅಧಿಕ ನಾಯಿ ಮರಿಗಳು ಸತ್ತಿವೆ ಎಂದು ಹೇಳಲಾಗಿದೆ.

ಮಂಗಗಳ ದಾರುಣ ಹಗೆ ಸಾಧಿಸುವುದನ್ನು ಕಂಡು ಆತಂಕಕ್ಕೀಡಾದ ಗ್ರಾಮಸ್ಥರು ಮಂಗಗಳಿಂದ ನಾಯಿಮರಿಗಳನ್ನು ರಕ್ಷಿಸುವಂತೆ ಕೋರಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದ್ದಾರೆ. ಸ್ಥಳೀಯ ಪೊಲೀಸರ ಬೆಂಬಲಗಳೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೋತಿಗಳನ್ನು ಹಿಡಿಯುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News