×
Ad

ಬಿಜೆಪಿಯನ್ನು ಸೋಲಿಸುವ ಗುರಿ ಹೊಂದಿರುವ ಪಕ್ಷಗಳು ಅಂತಿಮವಾಗಿ ಒಗ್ಗೂಡುತ್ತವೆ: ಶಶಿ ತರೂರ್ ವಿಶ್ವಾಸ

Update: 2021-12-19 11:27 IST

ಕೋಲ್ಕತ್ತಾ: ಬಿಜೆಪಿಯನ್ನು ಸೋಲಿಸುವ ಒಂದೇ ಗುರಿಯನ್ನು ಹೊಂದಿರುವುದರಿಂದ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುತ್ತಿರುವ ವಿರೋಧ ಪಕ್ಷಗಳು ಅಂತಿಮವಾಗಿ ಒಗ್ಗೂಡಲಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಶನಿವಾರ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರದ ಎನ್‌ಡಿಎ ಸರಕಾರವು ಉತ್ತಮ ಆಡಳಿತ ಸಪ್ತಾಹವನ್ನು ಆಚರಿಸುವ ನಿರ್ಧಾರವನ್ನು  ಮಾಜಿ ಕೇಂದ್ರ ಸಚಿವರು  ಲೇವಡಿ ಮಾಡಿದರು. ಕಳೆದ ಏಳು ವರ್ಷಗಳಿಂದ "ಉತ್ತಮ ಆಡಳಿತದ ವಸ್ತು" ಕಾಣೆಯಾಗಿದೆ.  ಉತ್ತಮ ಆಡಳಿತದ ಬದಲಿಗೆ ಘೋಷಣೆಗಳು ಹಾಗೂ  ಸಂಕೇತಗಳ ರಾಜಕೀಯವು ಕಾಣಿಸುತ್ತಿದೆ ಎಂದು ಹೇಳಿದರು.

"ರಾಜಕೀಯದಲ್ಲಿ ಒಂದು ವಾರ ಕೂಡ ದೀರ್ಘ ಸಮಯ. ಹಾಗಾಗಿ ಮುಂದಿನ ಲೋಕಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷವಿದೆ. ಬಿಜೆಪಿಯನ್ನು ಸೋಲಿಸಲು ವಿಭಿನ್ನ ಧ್ವನಿಯಲ್ಲಿ ಮಾತನಾಡುವವರು ಒಟ್ಟಾಗಿ ಬರುತ್ತಾರೆ ಎಂಬ ಭರವಸೆ ನಮ್ಮದು. ಬಿಜೆಪಿಯನ್ನು ಸೋಲಿಸುವುದು ಮಾತ್ರವಲ್ಲದೆ ಅದರ ನೀತಿಗಳು ಮತ್ತು ರಾಜಕೀಯವನ್ನೂ ಸೋಲಿಸುವುದು ಎಲ್ಲರ ಗುರಿಯಾಗಿದೆ ”ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿದರು.

ಟಿಎಂಸಿ ಸೇರಿದಂತೆ ಹಲವು ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಹೋರಾಡಲು ವಿಫಲವಾದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿವೆ. ಇಂತಹ ಸಮಯದಲ್ಲಿ ತರೂರ್  ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News