ಬಿಹಾರ: ಎಸ್‌ಎಸ್‌ಬಿಯಿಂದ ಚೀನಿ ಪ್ರಜೆಯ ಬಂಧನ
Update: 2021-12-19 23:41 IST
ಪಾಟ್ನಾ,ಡಿ.19: ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ವು ಅಧಿಕೃತ ದಾಖಲೆಗಳಿಲ್ಲದೆ ಭಾರತ-ನೇಪಾಳ ಗಡಿಯ ಮೂಲಕ ಭಾರತದೊಳಗೆ ಪ್ರವೇಶಿಸಿದ್ದ ಚೀನಿ ಪ್ರಜೆಯೋರ್ವನನ್ನು ಬಿಹಾರದ ಮಧುಬನಿಯ ಮಾಧವಪುರ ಬ್ಲಾಕ್ ನಲ್ಲಿ ಶನಿವಾರ ಬಂಧಿಸಿದೆ.
ಆರೋಪಿಯನ್ನು ಚೀನಾದ ದಕ್ಷಿಣ ಕರಾವಳಿಯ ಫ್ಯುಜಿಯನ್ ಪ್ರಾಂತದ ನಿವಾಸಿ ಝಿಯೊವು ಜಿಯಾಂಗ್ ಷಿ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದು,ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ವಿಚಾರಣೆಯ ಬಳಿಕ ಎಸ್ಎಸ್ಬಿ ಆರೋಪಿಯನ್ನು ಪೊಲೀಸರಿಗೆ ಹಸ್ತಾಂತರಿಸಿತ್ತು.
ಆರೋಪಿಯಿಂದ ಮೊಬೈಲ್ ಫೋನ್ ಗಳು ಮತ್ತು ಕೆಲವು ಕಾಗದಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಪೊಲೀಸರು ತಿಳಿಸಿದರು.