ಪೆಗಾಸಸ್ ಸಮಿತಿ ಮಾಹಿತಿ ಪಡೆಯಲು ಸಂವಿಧಾನದ 167ನೇ ವಿಧಿ ಚಲಾಯಿಸಿದ ಪಶ್ಚಿಮಬಂಗಾಳ ರಾಜ್ಯಪಾಲ ಜಗದೀಪ್

Update: 2021-12-21 08:20 GMT
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ (PTI)

ಕೋಲ್ಕತಾ: ಪೆಗಾಸಸ್ ಸಾಫ್ಟ್‌ವೇರ್ ಬಳಸಿ ಫೋನ್ ಕದ್ದಾಲಿಕೆ ಆರೋಪದ ಕುರಿತು ತನಿಖಾ ಸಮಿತಿಯನ್ನು ರಚಿಸುವ ನಿರ್ಧಾರವನ್ನು ಪಶ್ಚಿಮ ಬಂಗಾಳ ಸರಕಾರ ಹೇಗೆ ತೆಗೆದುಕೊಂಡಿದೆ ಎಂಬುದರ ಕುರಿತು ಮಾಹಿತಿ ನೀಡಲು ಮುಖ್ಯ ಕಾರ್ಯದರ್ಶಿ ಹರಿಕೃಷ್ಣ ದ್ವಿವೇದಿ ವಿಫಲರಾಗಿದ್ದಾರೆ ಎಂದು ಪ್ರತಿಪಾದಿಸಿದ ರಾಜ್ಯಪಾಲ ಜಗದೀಪ್ ಧಂಕರ್ ಅವರು ಸರಕಾರವು ತನಿಖಾ ಆಯೋಗವನ್ನು ರಚಿಸುವುದಕ್ಕೆ ಕಾರಣವಾದ ಪ್ರಕ್ರಿಯೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಸಂವಿಧಾನದ 167 ನೇ ವಿಧಿ ಚಲಾಯಿಸಿದ್ದೇನೆ ಎಂದು ಸೋಮವಾರ ಹೇಳಿದ್ದಾರೆ ಎಂದು indianexpress.com ವರದಿ ಮಾಡಿದೆ.

ಸಂವಿಧಾನದ 167 ನೇ ವಿಧಿಯು ಮುಖ್ಯಮಂತ್ರಿಯು ರಾಜ್ಯಪಾಲರಿಗೆ ಮಾಹಿತಿಯನ್ನು ಒದಗಿಸಬೇಕೆನ್ನುವುದನ್ನು ತಿಳಿಸುತ್ತದೆ.

ಡಿಸೆಂಬರ್ 18 ರ ಸಂಜೆಯೊಳಗೆ ದಾಖಲೆಗಳನ್ನು ತನಗೆ ಒದಗಿಸುವಂತೆ ಮುಖ್ಯ ಕಾರ್ಯದರ್ಶಿಗೆ ಕಳೆದ ವಾರ ಧಂಕರ್ ಅವರು ಸೂಚನೆ ನೀಡಿದ್ದರು.

"ಪೆಗಾಸಸ್' ವಿಚಾರಣಾ ಆಯೋಗವನ್ನು ರಚಿಸುವ ದಿನಾಂಕ 26.07.2021 ರ ಅಧಿಸೂಚನೆಯ ವಿತರಣೆಗೆ ಕಾರಣವಾಗುವ ಎಲ್ಲಾ ಸಂಬಂಧಿತ ಪ್ರಕ್ರಿಯೆಗಳು ಮತ್ತು ದಾಖಲಾತಿಗಳನ್ನು ಪಡೆಯಲು ನಾನು ವಿಧಿ 167 ಅನ್ನು ಚಲಾಯಿಸಿದ್ದೇನೆ. ದುರದೃಷ್ಟವಶಾತ್ ಮುಖ್ಯ ಕಾರ್ಯದರ್ಶಿಗಳು ಅಂತಹ ಮಾಹಿತಿಯನ್ನು ಒದಗಿಸಲು ವಿಫಲವಾಗಿರುವುದರಿಂದ ಇದು ಅನಿವಾರ್ಯವಾಗಿದೆ” ಎಂದು ರಾಜ್ಯಪಾಲರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News