ಕೋವಿಡ್ ಲಸಿಕೆ ಖರೀದಿಗೆ ಕೇಂದ್ರದಿಂದ 19.675 ಕೋ.ರೂ. ವೆಚ್ಚ
Update: 2021-12-23 23:31 IST
ಹೊಸದಿಲ್ಲಿ, ಡಿ. 23: ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ಪೂರೈಕೆಗೆ ಕೋವಿಡ್ ಲಸಿಕೆ ಖರೀದಿಸಲು ಕೇಂದ್ರ ಸರಕಾರ 19,675 ಕೋ.ರೂ. ವೆಚ್ಚ ಮಾಡಿದೆ ಎಂದು ಸರಕಾರದ ದತ್ತಾಂಶ ತಿಳಿಸಿದೆ.
2021-2022ರ ಕೇಂದ್ರ ಬಜೆಟ್ನಲ್ಲಿ ಕೇಂದ್ರ ಸರಕಾರ ಕೋವಿಡ್ ಲಸಿಕೆಗಾಗಿ 35,000 ಕೋಟಿ ರೂಪಾಯಿಯನ್ನು ಮೀಸಲಿರಿಸಿದೆ. ಸಾಮಾಜಿಕ ಕಾರ್ಯಕರ್ತ ಅಮಿತ್ ಗುಪ್ತಾ ಅವರು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ಸಲ್ಲಿಸಿದ ಅರ್ಜಿಗೆ ಕೇಂದ್ರ ಸರಕಾರ ಈ ಪ್ರತಿಕ್ರಿಯೆ ನೀಡಿದೆ. ಮೇ 1ರಿಂದ ಡಿಸೆಂಬರ್ 20ರ ವರೆಗೆ ಸರಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ 117.56 ಕೋಟಿ ಅಂದರೆ ಶೇ. 96.5 ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕೋವಿಡ್ ಲಸಿಕೆ ನಿರ್ವಹಾ ಘಟಕ ಹೇಳಿದೆ.