ನಾಗಾಲ್ಯಾಂಡ್ ನಿಂದ ಅಫ್‌ಸ್ಪಾ ಹಿಂಪಡೆಯುವ ಕುರಿತು ಪರಿಶೀಲಿಸಲು ಸಮಿತಿ ರಚನೆ

Update: 2021-12-26 17:36 GMT

ಹೊಸದಿಲ್ಲಿ, ಡಿ. 26: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಶಸಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್ಎಸ್ಪಿಎ)ಯನ್ನು ಹಿಂಪಡೆಯುವ ಕುರಿತು ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರೂಪಿಸಲಾಗುವುದು ಎಂದು ನಾಗಲ್ಯಾಂಡ್ ಸರಕಾರ ಹೇಳಿದೆ. 

ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫಿಯು ರಿಯೋ, ಉಪ ಮುಖ್ಯಮಂತ್ರಿ ವೈ. ಪಟ್ಟೋನ್, ಅಸ್ಸಾಂ ಮುಖ್ಯಮಂತ್ರಿ ಬಿಸ್ವಾ ಶರ್ಮಾ ಹಾಗೂ ಇತರು ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿದ ಮೂರು ದಿನಗಳ ಬಳಿಕ ನಾಗಾಲ್ಯಾಂಡ್ ಸರಕಾರ ಈ ಹೇಳಿಕೆ ನೀಡಿದೆ. ಕೇಂದ್ರ ಗೃಹ ಸಚಿವಾಲಯ (ಈಶಾನ್ಯ)ದ ಹೆಚ್ಚುವರಿ ಕಾರ್ಯದರ್ಶಿ ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ. ನಾಗಲ್ಯಾಂಡ್ನ ಮುಖ್ಯ ಕಾರ್ಯದರ್ಶಿ, ಐಜಿಪಿ ಈ ಸಮಿತಿಯಲ್ಲಿ ಒಳಗೊಳ್ಳಲಿದ್ದಾರೆ. ಐಜಿಎಆರ್ (ಉತ್ತರ) ಹಾಗೂ ಸಿಆರ್ಪಿಎಫ್ ನ ಪ್ರತಿನಿಧಿಗಳು ಕೂಡ ಸಮಿತಿಯ ಭಾಗವಾಗಿರಲಿದ್ದಾರೆ. ಈ ಸಮಿತಿ 45 ದಿನಗಳಲ್ಲಿ ವರದಿ ಸಲ್ಲಿಸಲಿದೆ.

ನಾಗಾಲ್ಯಾಂಡ್ ನಲ್ಲಿ ‘ಪ್ರಕ್ಷುಬ್ದಗೊಂಡ ಪ್ರದೇಶ’ಗಳ ಹಾಗೂ ಎಎಫ್ಎಸ್ಪಿಎ ಹಿಂಪಡೆದುಕೊಳ್ಳುವಿಕೆಯು ಕುರಿತ ನಿರ್ಧಾರ ಸಮಿತಿಯ ಶಿಫಾರಸು ಆಧರಿಸಿದೆ ಎಂದು ಹೇಳಿಕೆ ತಿಳಿಸಿದೆ. ‘ಪ್ರಕ್ಷುಬ್ದ’ ಎಂದು ಗುರುತಿಸಲಾದ ಪ್ರದೇಶದಲ್ಲಿ ವಾರಂಟ್ ಇಲ್ಲದೆ ಜನರನ್ನು ವಶಕ್ಕೆ ತೆಗೆದುಕೊಳ್ಳುವ ಹಾಗೂ ಬಂಧಿಸುವ ಅಧಿಕಾರವನ್ನು ಈ ವಿವಾದಾತ್ಮಕ ಕಾಯ್ದೆ ಶಸಸ್ತ್ರ ಪಡೆಗಳಿಗೆ ನೀಡಿದೆ. 

ನಾಗಾಲ್ಯಾಂಡ್ನ ಮೊನ್ ಜಿಲ್ಲೆಯ ಒಟಿಂಗ್ನಲ್ಲಿ ಡಿಸೆಂಬರ್ 4ರಂದು ಸೇನೆ ನಡೆಸಿದ ಹೊಂಚು ದಾಳಿಯಲ್ಲಿ ನಾಗರಿಕರು ಸಾವನ್ನಪ್ಪಿದ್ದರು. ಈ ಘಟನೆಯ ಬಳಿಕ ಈಶಾನ್ಯದ ಜನರು ಅಕ್ಷರಶಃ ಸಂಘಟಿತರಾಗಿ ಎಫ್ಎಸ್ಪಿಎ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News