ರಾಮನಾಥ ಗೋಯೆಂಕಾ ಪ್ರಶಸ್ತಿಗಳು: ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಸ್ಕ್ರೋಲ್, ಪಿಎಆರ್‌ಐಗೆ ಪುರಸ್ಕಾರ

Update: 2021-12-26 18:08 GMT

ಹೊಸದಿಲ್ಲಿ,ಡಿ.25: ಪ್ರತಿಷ್ಠಿತ ರಾಮನಾಥ ಗೋಯೆಂಕಾ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಪರಿಸರ,ವಿಜ್ಞಾನ ಮತ್ತು ತಂತ್ರಜ್ಞಾನ ವರದಿಗಾರಿಕೆಯ ಮುದ್ರಣ ವಿಭಾಗದಲ್ಲಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪಿಎಆರ್‌ಐ) ಮತ್ತು ವಿದ್ಯುನ್ಮಾನ ಪ್ರಸಾರ ವಿಭಾಗದಲ್ಲಿ ಸುದ್ದಿ ಜಾಲತಾಣ ಸ್ಕ್ರೋಲ್ ಪ್ರಶಸ್ತಿಗಳಿಗೆ ಭಾಜನವಾಗಿವೆ.

ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ನೇತೃತ್ವದ ಪಿಎಆರ್ಐ ತಂಡವು 14 ವರದಿಗಾರರನ್ನು ಒಳಗೊಂಡಿದ್ದರೆ ಸ್ಕ್ರೋಲ್ ತಂಡವು ಏಳು ವರದಿಗಾರರನ್ನು ಒಳಗೊಂಡಿದೆ.
ಪಿಎಆರ್‌ಐ ಪತ್ರಕರ್ತರು ದೇಶಾದ್ಯಂತದಿಂದ 20ಕ್ಕೂ ಅಧಿಕ ವರದಿಗಳ ಮೂಲಕ ಹವಾಮಾನ ಬದಲಾವಣೆಯ ಕುರಿತು ಸಮಗ್ರ ವರದಿಯೊಂದನ್ನು ಪ್ರಕಟಿಸಿದ್ದರು. ಈ ಪೈಕಿ ಐದು ವರದಿಗಳನ್ನು ಜಾರ್ಖಂಡ್ ಮತು ಒಡಿಶಾಗಳ ಶಾಲಾ-ಕಾಲೇಜುಗಳಲ್ಲಿ ಹವಾಮಾನ ಬದಲಾವಣೆಯ ಕುರಿತು ಬೋಧನೆಗೆ ಬಳಸಿಕೊಳ್ಳಲಾಗುತ್ತಿದೆ.
ಸ್ಕ್ರೋಲ್ ತನ್ನ ಇಕೋ ಇಂಡಿಯಾ ಕಾರ್ಯಕ್ರಮದ ಮೂಲಕ ಮಹಾರಾಷ್ಟ್ರದ ಮರಾಠವಾಡಾ ಪ್ರದೇಶದ ರೈತ ಮಹಿಳೆಯರ ಸಾಹಸವನ್ನು ವಿವರಿಸಿತ್ತು. ಕ್ರಮೇಣ ತಮ್ಮ ಕೃಷಿ ಭೂಮಿಯ ಮೇಲೆ ಹಕ್ಕುಗಳನ್ನು ಪಡೆದುಕೊಂಡ ಅವರು ಬರದ ಸಂಕಷ್ಟಗಳನ್ನು ಮೀರಿ ನಿಂತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News