×
Ad

ದಿಲ್ಲಿ: ಕೋವಿಡ್ ಪ್ರಕರಣಗಳಲ್ಲಿ ಏರಿಕೆ, ಹೊಸ ನಿರ್ಬಂಧಗಳು ತಕ್ಷಣದಿಂದ ಜಾರಿ

Update: 2021-12-28 17:00 IST
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ,ಡಿ.28: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ನಡುವೆಯೇ ಮಂಗಳವಾರ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಕಠಿಣ ನಿರ್ಬಂಧಗಳನ್ನು ಹೇರಲಾಗಿದ್ದು ಅವು ತಕ್ಷಣದಿಂದಲೇ ಜಾರಿಗೆ ಬಂದಿವೆ.

‌ಹೊಸ ನಿರ್ಬಂಧಗಳು:

*ರಾತ್ರಿ 10 ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ.

*ಆಸ್ಪತ್ರೆಗಳು, ಮಾಧ್ಯಮಗಳು, ಬ್ಯಾಂಕುಗಳು, ವಿಮೆ ಕಂಪನಿಗಳು ಮತ್ತು ದೂರಸಂಪರ್ಕ ಸೇವೆಗಳು ಸೇರಿದಂತೆ ನಿಗದಿತ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ಶೇ.50ಕ್ಕೆ ಸೀಮಿತ.

*ಮದುವೆಗಳನ್ನು ನ್ಯಾಯಾಲಯಗಳು ಅಥವಾ ಮನೆಗಳಲ್ಲಿ ಮಾತ್ರ ನಡೆಸಬೇಕು ಮತ್ತು ಕೇವಲ 20 ಜನರು ಭಾಗವಹಿಸಬಹುದು. 20 ಜನರ ಮಿತಿ ಅಂತ್ಯಸಂಸ್ಕಾರಗಳಿಗೂ ಅನ್ವಯ.

*ಮಾಲ್ ಗಳು ಮತ್ತು ಅಂಗಡಿಗಳನ್ನು ಸಮ-ಬೆಸ ನಿಯಮದಡಿ ದಿನ ಬಿಟ್ಟು ದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರೆಯಬೇಕು. ಆನ್‌ ಲೈನ್ ಪೂರೈಕೆಗಳಿಗೆ ನಿರ್ಬಂಧವಿಲ್ಲ.

*ವಸತಿ ಬಡಾವಣೆಗಳಲ್ಲಿಯ ಒಂಟಿ ಅಂಗಡಿಗಳು ಮತ್ತು ಮಾರುಕಟ್ಟೆಗಳಿಗೆ ಸಮ-ಬೆಸ ನಿಯಮ ಅನ್ವಯವಾಗುವುದಿಲ್ಲ.

*ಸಿನೆಮಾಗಳು,ಮಲ್ಟಿಫ್ಲೆಕ್ಸ್‌ಗಳು ಮತ್ತು ಜಿಮ್ ಗಳಿಗೆ ಮತ್ತೆ ಬೀಗ. ಶಾಲಾಕಾಲೇಜುಗಳೂ ಮುಚ್ಚಿರುತ್ತವೆ.

* ರೆಸ್ಟೋರೆಂಟ್ ಗಳು ಮತ್ತು ಬಾರ್‌ ಗಳಿಗೆ ಶೇ.50 ಸಾಮರ್ಥ್ಯದೊಂದಿಗೆ ರಾತ್ರಿ 10 ಗಂಟೆಯವರೆಗೆ ಮಾತ್ರ ವ್ಯವಹಾರಕ್ಕೆ ಅವಕಾಶ.

* ಶೇ.50ರಷ್ಟು ಪ್ರಯಾಣಿಕ ಸಾಮರ್ಥ್ಯದೊಂದಿಗೆ ದಿಲ್ಲಿ ಮೆಟ್ರೋ ಕಾರ್ಯಾಚರಣೆ

* ಸಲೂನುಗಳು ಮತ್ತು ಪಾರ್ಲರ್‌ ಗಳು ಎಂದಿನಂತೆ ತೆರೆದಿರಲಿವೆ. ಸ್ಪಾ ಮತ್ತು ವೆಲ್‌ನೆಸ್ ಕ್ಲಿನಿಕ್‌ ಗಳು ತೆರೆದಿರುವುದಿಲ್ಲ.

*ರಾಜಕೀಯ,ಧಾರ್ಮಿಕ ಮತ್ತು ಉತ್ಸವ ಸಂಬಂಧಿತ ಸಮಾವೇಶಗಳಿಗೆ ಅವಕಾಶವಿಲ್ಲ. ಧಾರ್ಮಿಕ ಸ್ಥಳಗಳನ್ನು ತೆರೆದಿಡಬಹುದು, ಆದರೆ ಜನರ ಪ್ರವೇಶಕ್ಕೆ ಅವಕಾಶವಿಲ್ಲ.

* ಸಾರ್ವಜನಿಕ ಉದ್ಯಾನವನಗಳು ತೆರೆದಿರುತ್ತವೆ,ಆದರೆ ಪಿಕ್ನಿಕ್‌ಗಳು ಅಥವಾ ಕೂಟಗಳಿಗೆ ಅವಕಾಶವಿಲ್ಲ.

ಸೋಮವಾರ ದಿಲ್ಲಿಯಲ್ಲಿ 331 ಹೊಸ ಸೋಂಕು ಪ್ರಕರಣಗಳೊಂದಿಗೆ ಕಳೆದ ಆರು ತಿಂಗಳುಗಳಲ್ಲಿ ಒಂದು ದಿನದ ಅತ್ಯಧಿಕ ಏರಿಕೆ ದಾಖಲಾಗಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಎರಡು ವಾರಗಳಲ್ಲಿ ಒಮೈಕ್ರಾನ್ನ ಪಾಲು 2-3 ಶೇ.ದಿಂದ 25-30 ಶೇ.ಕ್ಕೆ ಏರಿಕೆಯಾಗಿದೆ. ಎರಡು ದಿನಗಳಿಂದ ಪಾಸಿಟಿವಿಟಿ ದರ ಶೇ.0.5ಕ್ಕಿಂತ ಹೆಚ್ಚಿರುವುದು ಯೆಲ್ಲೊ ಅಲರ್ಟ್ ಘೋಷಣೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News