×
Ad

ರಸ್ತೆ ಅಪಘಾತ; ​'ಬಚ್‌ಪನ್ ಕಾ ಪ್ಯಾರ್' ಖ್ಯಾತಿಯ ಬಾಲಕನಿಗೆ ಗಂಭೀರ ಗಾಯ

Update: 2021-12-29 08:29 IST

ರಾಂಚಿ: 'ಬಚ್‌ಪನ್ ಕಾ ಪ್ಯಾರ್' ವೀಡಿಯೊ ಮೂಲಕ ದೇಶಾದ್ಯಂತ ಮನೆಮಾತಾಗಿದ್ದ ಬಾಲಕ ಸಹದೇವ್ ದಿರಾಡೊ ಮಂಗಳವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾನೆ. ಛತ್ತೀಸ್‌ ಗಢದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಸಹದೇವ್ ತನ್ನ ತಂದೆಯ ಜತೆಗೆ ಮೋಟರ್ ಸೈಕಲ್‌ನಲ್ಲಿ ತನ್ನ ಗ್ರಾಮಕ್ಕೆ ಹೋಗುತ್ತಿದ್ದಾಗ ಈ ಅಪಘಾತ ನಡೆದಿದೆ. ಮೋಟರ್ ಸೈಕಲ್‌ನಿಂದ ಬಿದ್ದ ಸಹದೇವ್‌ಗೆ ತೀವ್ರ ಗಾಯಗಳಾಗಿವೆ.

ತಕ್ಷಣವೇ ಸಹದೇವ್‌ ನನ್ನು ಜಿಲ್ಲಾ ಆಸ್ಪತ್ರೆಗೆ ಕರೆ ತರಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಜಗದಾಳಪುರ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ತಲೆಗೆ ಗಂಭೀರ ಗಾಯಗಳಾಗಿರುವ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಸುಕ್ಮಾ ಜಿಲ್ಲಾಧಿಕಾರಿ ವಿನೀತ್ ನಂದನವಾರ್ ಮತ್ತು ಎಸ್ಪಿ ಸುನೀನ್ ಶರ್ಮಾ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News