×
Ad

ನಾಗಾಲ್ಯಾಂಡ್‌ ನಾಗರಿಕರ ಹಿಂಸಾಚಾರ: ಯೋಧರ ತನಿಖೆ ನಡೆಸುವಂತೆ ಒಪ್ಪಿಗೆ ನೀಡಿದ ಸೈನ್ಯ; ವರದಿ

Update: 2021-12-29 13:30 IST

ಕೊಹಿಮಾ: ಡಿಸೆಂಬರ್ 5 ರಂದು 14 ನಾಗರಿಕರನ್ನು ಬಲಿತೆಗೆದುಕೊಂಡ ಭೀಕರ ದಾಳಿಯಲ್ಲಿ ಭಾಗಿಯಾಗಿದ್ದ ಸೈನಿಕರ ಹೇಳಿಕೆಗಳನ್ನು ದಾಖಲಿಸಲು ನಾಗಾಲ್ಯಾಂಡ್‌ನ ವಿಶೇಷ ತನಿಖಾ ತಂಡ ಅಥವಾ ಎಸ್‌ಐಟಿಗೆ ಪ್ರವೇಶ ನೀಡಲು ಸೇನೆಯು ಒಪ್ಪಿಕೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉದ್ರಿಕ್ತ ಗ್ರಾಮಸ್ಥರಿಂದ ಓರ್ವ ಯೋಧ ಕೂಡಾ ಸಾವನ್ನಪ್ಪಿದ್ದ.

ನಾಗಾಲ್ಯಾಂಡ್ ಎಸ್‌ಐಟಿಯು ಈ ವಾರ 21 ಪ್ಯಾರಾ ವಿಶೇಷ ಪಡೆಯ ಯೋಧರ ಹೇಳಿಕೆಗಳನ್ನು ದಾಖಲಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಾಗಾಲ್ಯಾಂಡ್ ಸಶಸ್ತ್ರ ಪಡೆಗಳ (ವಿಶೇಷ) ಅಧಿಕಾರಗಳ ಕಾಯಿದೆ ಅಥವಾ ಕೇಂದ್ರದ ಅನುಮತಿಯಿಲ್ಲದೆ ಶೋಷಣೆಯಿಂದ ಭದ್ರತಾ ಪಡೆಗಳನ್ನು ರಕ್ಷಿಸುವ AFSPA ಅಡಿಯಲ್ಲಿ ರಾಜ್ಯ ಮಟ್ಟದ ತಂಡದಿಂದ ತನಿಖೆ ಹೇಗೆ ಮುಂದುವರಿಯುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News