×
Ad

ದಲಿತ ಬಾಲಕಿಯ ಹಲ್ಲೆ ಖಂಡಿಸಿ ಪ್ರತಿಭಟನೆ: ಉತ್ತರಪ್ರದೇಶ ಕಾಂಗ್ರೆಸ್ ಮುಖಂಡನ ಬಂಧನ

Update: 2021-12-30 23:30 IST

ಅಮೇಥಿ (ಉ.ಪ್ರ.), ಡಿ. 30: ಹದಿನಾರು ವರ್ಷದ ದಲಿತ ಬಾಲಕಿಗೆ ಥಳಿಸಿದ ಘಟನೆಗೆ ಸಂಬಂಧಿಸಿ ರಾಜ್ಯ ಸರಕಾರದ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದ ಉತ್ತರಪ್ರದೇಶ ಕಾಂಗ್ರೆಸ್ ವರಿಷ್ಠ ಅಜಯ್ ಕುಮಾರ್ ಲಲ್ಲು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಜಯ್ ಕುಮಾರ್ ಲಲ್ಲು ನಾಯಕತ್ವದಲ್ಲಿ ದೊಡ್ಡ ಸಂಖ್ಯೆಯ ಕಾರ್ಯಕರ್ತರು ರಾಮಲೀಲಾ ಮೈದಾನದಿಂದ ಪ್ರತಿಭಟನಾ ರ್ಯಾಲಿ ಆರಂಭಿಸಿ ರಾಜೀವ್‌ ಗಾಂಧಿ ಟ್ರೈಸೆಕ್ಷನ್ನಲ್ಲಿ ಅಂತ್ಯಗೊಳಿಸಿದರು. ಅಲ್ಲದೆ, ಅಲ್ಲಿ ಧರಣಿ ಕುಳಿತರು.

ರಾಜ್ಯದಲ್ಲಿರುವ ಬಿಜೆಪಿ ಸರಕಾರ ಹಾಗೂ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಅನಂತರ ಪೊಲೀಸರು ಲಲ್ಲು ಅವರನ್ನು ಬಂಧಿಸಿದರು. ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿರುವುದು ಹಾಗೂ ರಸ್ತೆಯಲ್ಲಿ ಕುಳಿತುಕೊಂಡಿರುವ ಆರೋಪದಲ್ಲಿ ಅಜಯ್ ಕುಮಾರ್ ಲಲ್ಲು ಅವರನ್ನು ಬಂಧಿಸಲಾಗಿದೆ ಎಂದು ಅಮೇಥಿ ಪೊಲೀಸ್ ಅಧೀಕ್ಷಕ ದಿನೇಶ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News