ಅಂಡರ್-19 ಏಶ್ಯಕಪ್: ಭಾರತ ಚಾಂಪಿಯನ್

Update: 2021-12-31 13:27 GMT
photo:twitter/@BCCI

ದುಬೈ, ಡಿ.31: ಮಳೆಬಾಧಿತ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 9 ವಿಕೆಟ್‌ಗಳ ಅಂತರದಿಂದ ಮಣಿಸಿರುವ ಭಾರತದ ಅಂಡರ್-19 ಕ್ರಿಕೆಟ್ ತಂಡ ಏಶ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಂಡರ್-19 ಏಶ್ಯಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಭಾರತವು 8ನೇ ಬಾರಿ ಏಶ್ಯಕಪ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದೆ.

 ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ 38 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಲಷ್ಟೇ ಶಕ್ತವಾಯಿತು. ಡಿಎಲ್‌ಎಸ್ ನಿಯಮದ ಪ್ರಕಾರ ಭಾರತ ಗೆಲುವಿಗೆ 32 ಓವರ್‌ಗಳಲ್ಲಿ 102 ರನ್ ಪರಿಷ್ಕೃತ ಗುರಿ ಪಡೆಯಿತು. ಭಾರತವು 21.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತು. ಆರಂಭಿಕ ಬ್ಯಾಟರ್ ರಘುವಂಶಿ (56 ರನ್,67 ಎಸೆತ, 7 ಬೌಂ.) ಹಾಗೂ ಶೇಖ್ ರಶೀದ್ (31 ರನ್.49 ಎಸೆತ, 2 ಬೌಂ.) ಔಟಾಗದೆ ಉಳಿದರು.

ಇದಕ್ಕೂ ಮೊದಲು ಅಮೋಘ ಬೌಲಿಂಗ್ ಸಂಘಟಿಸಿದ ಭಾರತವು ಶ್ರೀಲಂಕಾ ತಂಡವನ್ನು 9 ವಿಕೆಟ್ ನಷ್ಟಕ್ಕೆ 106 ರನ್‌ಗೆ ನಿಯಂತ್ರಿಸಿತು. ಭಾರತದ ವೇಗಿದ್ವಯರಾದ ರಾಜ್ಯವರ್ಧನ್ ಹಂಗರ್‌ಗೇಕರ್ ಹಾಗೂ ರವಿ ಕುಮಾರ್ ಅವರು ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು. ಸ್ಪಿನ್ ದ್ವಯರಾದ ವಿಕಿ ಒಸ್ಟ್‌ವಾಲ್(3-11) ಹಾಗೂ ಕುಶಾಲ್ ತಾಂಬೆ(2-23)ಐದು ವಿಕೆಟ್‌ಗಳನ್ನು ಹಂಚಿಕೊಂಡರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News