ದೇಶದಲ್ಲಿ ಕಳೆದ ವರ್ಷ 30,000ಕ್ಕೂ ಅಧಿಕ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದಾಖಲು: ಉತ್ತರ ಪ್ರದೇಶದಲ್ಲಿ ಗರಿಷ್ಠ

Update: 2022-01-01 09:55 GMT

ಹೊಸದಿಲ್ಲಿ: ದೇಶದಲ್ಲಿ 2014ರಿಂದೀಚೆಗೆ ಗರಿಷ್ಠ 30,864 ಮಹಿಳೆಯರ ವಿರುದ್ಧದ ಅಪರಾಧಗಳ ಕುರಿತಾದ ದೂರುಗಳನ್ನು ರಾಷ್ಟ್ರೀಯ ಮಹಿಳಾ ಆಯೋಗ 2021ರಲ್ಲಿ ಸ್ವೀಕರಿಸಿದೆ. ಈ ದೂರುಗಳ ಪೈಕಿ ಅರ್ಧಕ್ಕೂ ಹೆಚ್ಚು ಉತ್ತರ ಪ್ರದೇಶದಿಂದ ಬಂದಿವೆ ಎಂದು newindianexpress.com ವರದಿ ಮಾಡಿದೆ.

2020ಗೆ ಹೋಲಿಸಿದಾಗ 2021ರಲ್ಲಿ ದಾಖಲಾದ ದೂರುಗಳ ಸಂಖ್ಯೆಯಲ್ಲಿ ಶೇ 30ರಷ್ಟು ಏರಿಕೆಯಾಗಿದೆ. 2020ರಲ್ಲಿ ದಾಖಲಾದ ದೂರುಗಳ ಸಂಖ್ಯೆ 23,722 ಆಗಿದೆ.

ಕಳೆದ ವರ್ಷದ ದೂರುಗಳ ಪೈಕಿ ಗರಿಷ್ಠ 11,013 ದೂರುಗಳು ಮಹಿಳೆಯರ ಭಾವನಾತ್ಮಕ ನಿಂದನೆಗೆ ಸಂಬಂಧಿಸಿದ್ದಾಗಿದ್ದರೆ 6,633 ಪ್ರಕರಣಗಳು ಕೌಟುಂಬಿಕ ಹಿಂಸೆ ಹಾಗೂ 4,589 ವರದಕ್ಷಿಣೆ ಕಿರುಕುಳ ಪ್ರಕರಣಗಳಾಗಿವೆ.

ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ದಾಖಲಾದ 15,828 ದೂರುಗಳು ರಾಜ್ಯವೊಂದು ದಾಖಲಿಸಿದ ದೂರುಗಳಲ್ಲಿ ಗರಿಷ್ಠವಾಗಿದೆ. ನಂತರದ ಸ್ಥಾನಗಳಲ್ಲಿ ದಿಲ್ಲಿ (3,336), ಮಹಾರಾಷ್ಟ್ರ (1,504), ಹರ್ಯಾಣ (1,460) ಮತ್ತು ಬಿಹಾರ (1,456) ರಾಜ್ಯಗಳಿವೆ.

ದೇಶದಲ್ಲಿ 2014ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ 33,906 ಪ್ರಕರಣಗಳು ದಾಖಲಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News