×
Ad

ಬಲೂನ್‌ಗಳಿಗೆ ಗಾಳಿ ತುಂಬಲು ಬಳಸುತ್ತಿದ್ದ ಸಿಲಿಂಡರ್ ಸ್ಫೋಟ: 3 ಮಕ್ಕಳು ಸೇರಿದಂತೆ ಐವರಿಗೆ ಗಾಯ

Update: 2022-01-02 12:31 IST
Photo: NDTV 

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಲೂನ್‌ಗಳಿಗೆ ಗಾಳಿ ತುಂಬಲು ಬಳಸುತ್ತಿದ್ದ ಸಿಲಿಂಡರ್ ಸ್ಫೋಟಗೊಂಡು ಮೂವರು ಮಕ್ಕಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ.

ಘಟನೆ ನಡೆದಾಗ ಬಲೂನ್ ಮಾರಾಟಗಾರರೊಬ್ಬರು ಹೊಸ ವರ್ಷದ ಜಾತ್ರೆಯಲ್ಲಿ ಗಾಳಿ ತುಂಬುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಲೂನ್‌ಗಳನ್ನು ಖರೀದಿಸಲು ಅವರ ಸುತ್ತಲೂ ಅನೇಕ ಮಕ್ಕಳು ಜಮಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಎಂಟು ವರ್ಷದ ಮಗುವಿನ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಇಂದೋರ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉಳಿದವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಫೋಟದ ತೀವ್ರತೆಗೆ ಜಾತ್ರೆಯ ಸಮೀಪವಿರುವ ಗೋಡೆಗಳಿಗೆ ಹಾನಿಯಾಗಿದೆ.

ಸಿಲಿಂಡರ್‌ನಲ್ಲಿ ಹೈಡ್ರೋಜನ್ ಅನಿಲದ ತಪ್ಪು ಮಿಶ್ರಣದಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿ ಪ್ರೀತಿ ಗಾಯಕ್ವಾಡ್ ಹೇಳಿದ್ದಾರೆ. ಹಾನಿಗೊಳಗಾದ ಸಿಲಿಂಡರ್‌ನ ಭಾಗಗಳನ್ನು ತನಿಖೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News