ಪ್ರಧಾನಿ ರ‍್ಯಾಲಿಯಲ್ಲಿ ಖಾಲಿ ಕುರ್ಚಿ; ಗಮನ ಬೇರೆಡೆ ಸೆಳೆಯಲು ಭದ್ರತಾ ಲೋಪದ ತಂತ್ರ: ಸಿಧು

Update: 2022-01-06 17:30 GMT
ನವಜೋತ್ ಸಿಂಗ್ ಸಿಧು

ಚಂಡಿಗಢ, ಜ. 6: ಫಿರೋಜ್‌ಪುರದಲ್ಲಿ ಬುಧವಾರ ಆಯೋಜಿಸಲಾಗಿದ್ದ ಪ್ರಧಾನಿ ಅವರ ಸಾರ್ವಜನಿಕ ಸಭೆಯಲ್ಲಿ ಖಾಲಿ ಕುರ್ಚಿಗಳೇ ಕಂಡು ಬಂದ ಹಿನ್ನೆಲೆಯಲ್ಲಿ ಗಮನ ಬೇರೆಡೆ ಸೆಳೆಯಲು ‘ಭದ್ರತಾ ಲೋಪ’ದ ತಂತ್ರ ಹೆಣೆಯಲಾಗಿದೆ ಎಂದು ಪಂಜಾಬ್ ನ ಕಾಂಗ್ರೆಸ್ ವರಿಷ್ಠ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. 

ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಅವರು ನೀಡಿದ ಹೇಳಿಕೆಯನ್ನೇ ನವಜ್ಯೋತ್ ಸಿಂಗ್ ಸಿಧು ಪುನರುಚ್ಚರಿಸಿದ್ದಾರೆ. ಈ ಹಿಂದೆ ಮಾತನಾಡಿದ್ದ ಮುಖ್ಯಮಂತ್ರಿ ಚರಣ್ಜೀತ್ ಚನ್ನಿ, ಫಿರೋಜ್‌ಪುರ ಫ್ಲೈ ಓರ್ವರ್‌ನಲ್ಲಿ  ಪ್ರಧಾನಿ ಅವರ ವಾಹನ ವ್ಯೂಹ ಸಿಲುಕಿಕೊಂಡಿರುವ ಸಂದರ್ಭ ಅವರಿಗೆ ಯಾವುದೇ ಬೆದರಿಕೆಯ ಅಥವಾ ಭದ್ರತಾ ಲೋಪದ ಆರೋಪವನ್ನು ನಿರಾಕರಿಸಿದ್ದಾರೆ. ಅಲ್ಲದೆ ಅವರು, ಫಿರೋಜ್‌ಪುರದಲ್ಲಿ ಆಯೋಜಿಸಲಾಗಿದದ ಬಿಜೆಪಿಯ ಸಾರ್ವಜನಿಕ ರ್ಯಾಲಿ ಪ್ರದೇಶದಲ್ಲಿ 70,000 ಕುರ್ಚಿಗಳನ್ನು ಇರಿಸಲಾಗಿತ್ತು. ಆದರೆ, 700 ಜನರು ಮಾತ್ರ ಇದ್ದರು. ಇದಕ್ಕೆ ನಾನು ಏನು ಮಾಡಲಿ ? ಎಂದು ಪ್ರಶ್ನಿಸಿದ್ದರು. ಈ ನಡುವೆ, ಪಂಜಾಬ್ ಕಾಂಗ್ರೆಸ್ ‘‘70 ಸಾವಿರ ಕುರ್ಚಿ, 700 ಜನರು’’ ಎಂಬ ಹ್ಯಾಶ್‌ ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News