ಒಂದು ದಿನ ರಜೆ ಮಾಡಿದ್ದಕ್ಕೆ ಬಿಹಾರದ ಆರೋಗ್ಯ ಕಾರ್ಯಕರ್ತೆಯ ಮೇಲೆ ಹಲ್ಲೆ

Update: 2022-01-07 06:31 GMT

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯ ತಳಮಟ್ಟದ ಆರೋಗ್ಯ ಕಾರ್ಯಕರ್ತರು ಲಸಿಕೆ ನೀಡಿಕೆಯನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ. ಓರ್ವ ಕಾರ್ಯಕರ್ತೆಯ ಮೇಲೆ ಆಸ್ಪತ್ರೆಯ ಸಿಬ್ಬಂದಿ ಒಂದು ದಿನ ಕೆಲಸಕ್ಕೆ ಬರದ ಕಾರಣ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಜಗಳದಲ್ಲಿ ಆಸ್ಪತ್ರೆಯ ಸಿಬ್ಬಂದಿ ಮಹಿಳೆ, ಸಹಾಯಕ ನರ್ಸ್ ಮತ್ತು ಶುಶ್ರೂಷಕಿಯ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ.

ಜಮುಯಿಯ ಚಕೈ ಬ್ಲಾಕ್‌ನಲ್ಲಿ ಕೆಲಸ ಮಾಡುವ ಮಹಿಳೆಗೆ ಬುಧವಾರ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಮರುದಿನ ಮರಳಿ ಬಂದ ವೇಳೆ ಆಸ್ಪತ್ರೆಯ ಸಿಬ್ಬಂದಿ ಆಕೆಯನ್ನು ನಿಂದಿಸಿದ್ದು ಮಾತ್ರವಲ್ಲದೇ ಆಕೆಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಓರ್ವ ಪುರುಷ ಮತ್ತು ಮಹಿಳೆ ವಾಗ್ವಾದ ನಡೆಸುತ್ತಿರುವ ಮತ್ತು ಆಕೆಗೆ ಹೊಡೆಯುವುದು ವೀಡಿಯೊದಲ್ಲಿ ಸೆರೆಯಾಗಿದೆ. ಇನ್ನೊಂದು ವೀಡಿಯೊದಲ್ಲಿ ಮಹಿಳೆ ಈ ವಿಚಾರವನ್ನು ಅಧಿಕಾರಿಗಳೊಂದಿಗೆ ಪ್ರಸ್ತಾಪಿಸುತ್ತಿರುವುದು ಕಂಡುಬಂದಿದೆ.

ವ್ಯಾಕ್ಸಿನೇಷನ್ ಕರ್ತವ್ಯದಲ್ಲಿರುವ ತಳಮಟ್ಟದ ಕೆಲಸಗಾರರು ತಮ್ಮ ಕಿಟ್‌ಗಳೊಂದಿಗೆ ಆರೋಗ್ಯ ಕೇಂದ್ರದ ಮುಂದೆ ಜಮಾಯಿಸಿರುವುದನ್ನು ಮತ್ತೊಂದು ಕ್ಲಿಪ್ ತೋರಿಸುತ್ತದ. ಈ ವಿಚಾರಕ್ಕೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News