ನೀಟ್ ಪ್ರವೇಶಾತಿ: ಇತರ ಹಿಂದುಳಿದ ವರ್ಗಗಳಿಗೆ 27%, ಆರ್ಥಿಕ ದುರ್ಬಲ ವರ್ಗಗಳಿಗೆ 10% ಮೀಸಲಾತಿಗೆ ಸುಪ್ರೀಂ ಒಪ್ಪಿಗೆ

Update: 2022-01-07 08:46 GMT

ಹೊಸದಿಲ್ಲಿ:   ಈ ವರ್ಷ ವೈದ್ಯಕೀಯ ಕೋರ್ಸುಗಳಿಗೆ ಇತರ ಹಿಂದುಳಿದ ವರ್ಗಗಳಿಗೆ ಶೇ 27ರಷ್ಟು ಮೀಸಲಾತಿ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿಗೆ ಸುಪ್ರೀಂ ಕೋರ್ಟ್ ಇಂದು ಒಪ್ಪಿಗೆ ನೀಡುವುದರೊಂದಿಗೆ ಸುಮಾರು ನಾಲ್ಕು ತಿಂಗಳುಗಳ ವಿಳಂಬದ ನಂತರ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶಾತಿ ಆರಂಭಗೊಳ್ಳಲಿದೆ. ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ರೂ 8 ಲಕ್ಷ ಆದಾಯ ಮಿತಿ ಕೂಡ ಈ ವರ್ಷ ಊರ್ಜಿತದಲ್ಲಿರಲಿದೆ.

"ಈ ಪ್ರಕರಣದ ವಿಚಾರಣೆಯನ್ನು ಎರಡು ದಿನಗಳಿಂದ ನಡೆಸುತ್ತಿದ್ದೇವೆ. ನಾವು ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಕೌನ್ಸೆಲಿಂಗ್ ಆರಂಭಿಸಬೇಕು" ಎಂದು ಜಸ್ಟಿಸ್ ಡಿ ವೈ ಚಂದ್ರಚೂಡ್ ಹಾಗೂ ಜಸ್ಟಿಸ್ ಎ ಎಸ್ ಬೋಪಣ್ಣ ಅವರ ಪೀಠ ಹೇಳಿದೆ.

ಬಡ ಕುಟುಂಬಗಳ ಅಭ್ಯರ್ಥಿಗಳಿಗೆ ರೂ 8 ಲಕ್ಷ ಆದಾಯ ಮಿತಿ ಈ ವರ್ಷ ಊರ್ಜಿತದಲ್ಲಿರಲಿದ್ದರೂ ಈ ನಿಟ್ಟಿನಲ್ಲಿ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯ ನಂತರ  ನೀಡಲಾಗುವ ಅಂತಿಮ ತೀರ್ಪಿಗೆ  ಬದ್ಧವಾಗಬೇಕಿದೆ. ಈ ಪ್ರಕರಣದ ವಿಚಾರಣೆ ಮಾರ್ಚ್ 5ಕ್ಕೆ ನಿಗದಿಯಾಗಿದೆ.

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿ ವಿವಾದವು ಈ ಬಾರಿಯ ನೀಟ್ ಪ್ರವೇಶಾತಿಯನ್ನು ಬಾಧಿಸಿತ್ತು. ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ಕಿರಿಯ ವೈದ್ಯರು ಪ್ರವೇಶಾತಿ ವಿಳಂಬ ವಿರೋಧಿಸಿ 14 ದಿನಗಳ ಪ್ರತಿಭಟನೆಯನ್ನೂ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News