ತಿರುಪತಿ ಅರ್ಚಕರ ಮನೆಯಿಂದ ಭಾರೀ ಪ್ರಮಾಣದ ಚಿನ್ನಾಭರಣಗಳ ವಶ: ಸುದ್ದಿಯ ಸತ್ಯಾಂಶವೇನು?

Update: 2022-01-10 10:17 GMT

ಹೊಸದಿಲ್ಲಿ: ಪೊಲೀಸರ ಪತ್ರಿಕಾಗೋಷ್ಠಿಯದ್ದೆಂಬಂತೆ ಕಾಣುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಚಿನ್ನಾಭರಣಗಳನ್ನು ಮೇಜಿನಲ್ಲಿ ಇಡಲಾಗಿರುವುದು ಕಾಣಿಸುತ್ತದೆ. ತಿರುಪತಿ ದೇವಸ್ಥಾನದಲ್ಲಿ  ಕೆಲಸ ಮಾಡುವ ಅರ್ಚಕರೊಬ್ಬರ ನಿವಾಸದ ಮೇಲೆ ಆದಾಯ ತೆರಿಗೆ ದಾಳಿ ನಡೆಸಿದಾಗ 128 ಕೆಜಿ ಚಿನ್ನ ರೂ 150 ಕೋಟಿ ನಗದು ಹಾಗೂ ರೂ. 77 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವೀಡಿಯೋ ಜತೆಗಿನ ಪೋಸ್ಟ್ ಹೇಳುತ್ತದೆ. ಆದರೆ ಈ ಪ್ರಕರಣಕ್ಕೂ ತಿರುಪತಿಗೂ ಯಾವುದೇ ಸಂಬಂಧವಿಲ್ಲ ಎಂದು altnews.in ವರದಿ ಮಾಡಿದೆ.

ಫೇಸ್ಬುಕ್, ಟ್ವಿಟ್ಟರ್ ಹಾಗೂ ವಾಟ್ಸ್ಯಾಪ್‍ನಲ್ಲಿ ಹಲವರು ಶೇರ್ ಮಾಡಿರುವ ಈ ವೀಡಿಯೋವನ್ನು ದೈನಿಕ್ ಸವೇರಾ ಟೈಮ್ಸ್ ಹಾಗೂ ಝೀ5 ವೆಬ್‍ಸೈಟ್ ಕೂಡ ಶೇರ್ ಮಾಡಿವೆ.

ಆದರೆ ವಾಸ್ತವವಾಗಿ ಇದು ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೋ ಎಂದು ಓದುಗರೊಬ್ಬರು ಆಲ್ಟ್ ನ್ಯೂಸ್‍ಗೆ ತಿಳಿಸಿದ ನಂತರ ಆಲ್ಟ್ ನ್ಯೂಸ್ ಕೀವರ್ಡ್ ಸರ್ಚ್ ಮಾಡಿದಾಗ ಕಳೆದ ವರ್ಷದ ಮಾಧ್ಯಮ ವರದಿಗಳ ವರದಿ ಶೋಧ ಫಲಿತಾಂದಲ್ಲಿ ದೊರಕಿತ್ತು. 

ಡಿಸೆಂಬರ್ 21, 2021ರ ಹಿಂದು ವರದಿಯ ಪ್ರಕಾರ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿ ಸ್ಮಶಾನದಿಂದ 16 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು. ಚಿನ್ನಾಭರಣ ಮಳಿಗೆಯ ಗೋಡೆ ಕೊರೆದು ಅಲ್ಲಿನ ಸೀಸಿಟಿವಿಗಳಿಗೆ ಪೈಂಟ್ ಸ್ಪ್ರೇ ಮಾಡಿ ಚಿನ್ನಾಭರಣಗಳನ್ನು ಕೂಚಿಪಾಳಯಂ ಗ್ರಾಮದ ನಿವಾಸಿ 23 ವರ್ಷದ ಕೆ ರಾಮನ್ ದೋಚಿದ್ದ ಎಂದು ವರದಿಯಲ್ಲಿ ತಿಳಿಸಲಾಗಿತ್ತು. 

ಹಲವು ಇತರ ಮಾಧ್ಯಮಗಳೂ ಈ ಸುದ್ದಿಯನ್ನು ವರದಿ ಮಾಡಿತ್ತವಲ್ಲದೆ  ತಿರುಪತಿ ದೇವಸ್ಥಾನದ ಅರ್ಚಕರ ಮನೆಗೆ ಐಟಿ ದಾಳಿಯಲ್ಲಿ ಇಷ್ಟೊಂದು ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತೆಂಬುದಕ್ಕೆ ಆಧಾರವಾಗಿ ಯಾವುದೇ ವರದಿ ದೊರಕಿಲ್ಲ ಎಂದು altnews.com ವರದಿ ತಿಳಿಸಿದೆ.

ಕೃಪೆ: Altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News