ಮುಂಬೈ ಏರ್‌ಪೋರ್ಟ್ ನಲ್ಲಿ ಟೋ ವಾಹನಕ್ಕೆ ಬೆಂಕಿ: ಕೂದಲೆಳೆಯ ಅಂತರದಲ್ಲಿ ಪಾರಾದ 85 ಪ್ರಯಾಣಿಕರು

Update: 2022-01-10 18:26 GMT
Photo: Screengrab

ಮುಂಬೈ: ವಿಮಾನವನ್ನು ಹಿಂದಕ್ಕೆಳೆಯುವ ಟಗ್ ವಾಹನಕ್ಕೆ  ಹಠಾತ್ ಬೆಂಕಿ ಹತ್ತಿಕೊಂಡ ಘಟನೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಅಪರಾಹ್ನ ಸುಮಾರು 1 ಗಂಟೆಗೆ ಸಂಭವಿಸಿದೆ.

ಏರ್ ಇಂಡಿಯಾ ವಿಮಾನ ಎಐ-647 ಅನ್ನು ಈ ಟಗ್ ಹಿಂದಕ್ಕೆಳೆಯಬೇಕಿತ್ತು. ಆದರೆ ವಿಮಾನದ ಹತ್ತಿರದಲ್ಲಿರುವಾಗಲೇ ಈ ದುರಂತ ಸಂಭವಿಸಿದೆ. ಜಾಮ್ನಗರಕ್ಕೆ ಹೋಗುವ ವಿಮಾನದಲ್ಲಿ 85 ಮಂದಿ ಪ್ರಯಾಣಿಕರಿದ್ದರು. ಆದರೆ ಸುದೈವವಶಾತ್ ಈ ಬೆಂಕಿಯಿಂದ ವಿಮಾನಕ್ಕೆ ಯಾವುದೇ ಅಪಾಯವಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಅಗ್ನಿ ಶಾಮಕ ವಾಹನಗಳು ತಕ್ಷಣವೇ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News