ದ್ವೇಷವನ್ನು ಸೋಲಿಸಲು 'ಚುನಾವಣೆ' ಸೂಕ್ತ ಸಮಯ: ರಾಹುಲ್ ಗಾಂಧಿ
Update: 2022-01-10 22:52 IST
ಹೊಸದಿಲ್ಲಿ, ಜ. 10: ದ್ವೇಷವನ್ನು ಸೋಲಿಸಲು ಮುಂಬರುವ ವಿಧಾನ ಸಭೆ ಚುನಾವಣೆ ಸೂಕ್ತ ಸಮಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ಉತ್ತರಪ್ರದೇಶ ಸೇರಿದಂತೆ 5 ರಾಜ್ಯಗಳ ವಿಧಾನ ಸಭೆ ಚುನಾಣೆಗಳು 7 ಹಂತಗಳಲ್ಲಿ ಫೆಬ್ರವರಿ 10ರಿಂದ ಮಾರ್ಚ್ 7ರ ವರೆಗೆ ನಡೆಯಲಿದೆ.
ಮತ ಎಣಿಕೆ ಮಾರ್ಚ್ 10ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿತ್ತು. ದ್ವೇಷವನ್ನು ಸೋಲಿಸಲು 2022ರ ಚುನಾವಣೆ ಸೂಕ್ತ ಅವಕಾಶ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರದಲ್ಲಿ ಬಿಜೆಪಿಯನ್ನು ಸೋಲಿಸುವಂತೆ ಹಾಗೂ ಪಂಜಾಬ್ನಲ್ಲಿ ಅಧಿಕಾರ ಉಳಿಸುವಂತೆ ಕಾಂಗ್ರೆಸ್ ಮತದಾರರನ್ನು ಕೋರಿದೆ.