×
Ad

ಕೋವಿಡ್ ಉಲ್ಬಣ: ಕೇರಳದಲ್ಲಿ ಮದುವೆ, ಅಂತ್ಯಸಂಸ್ಕಾರಗಳಿಗೆ 50 ಜನರ ಮಿತಿ

Update: 2022-01-10 23:14 IST
 ಪಿಣರಾಯಿ ವಿಜಯನ್

ತಿರುವನಂತಪುರ,ಜ.10: ಇತ್ತೀಚಿಗೆ ಕೋವಿಡ್ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದುವೆಗಳು ಮತ್ತು ಅಂತ್ಯಸಂಸ್ಕಾರಗಳಲ್ಲಿ ಭಾಗವಹಿಸುವ ಜನರ ಗರಿಷ್ಠ ಸಂಖ್ಯೆಯನ್ನು 50ಕ್ಕೆ ಸೀಮಿತಗೊಳಿಸಿ ರಾಜ್ಯ ಸರಕಾರವು ಸೋಮವಾರ ಆದೇಶಿಸಿದೆ.

ಕೋವಿಡ್ ಪುನರ್ ಪರಿಶೀಲನೆ ಸಭೆಯ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಾಂಕ್ರಾಮಿಕ ಸಂಬಂಧಿತ ಹಲವಾರು ಕ್ರಮಗಳನ್ನು ಪ್ರಕಟಿಸಿದರು.

ಆದರೆ ಜನರ ಮಿತಿಯ ನಿಯಮವು ಮುಚ್ಚಿದ ಸ್ಥಳಗಳಿಗೆ ಅಥವಾ ತೆರೆದ ಸ್ಥಳಗಳಿಗೆ ಅಥವಾ ಎರಡಕ್ಕೂ ಅನ್ವಯಿಸುತ್ತದೆಯೇ ಎನ್ನುವುದನ್ನು ಆದೇಶದಲ್ಲಿ ನಿರ್ದಿಷ್ಟವಾಗಿ ತಿಳಿಸಿಲ್ಲ.

ಇಂತಹ ಕಾರ್ಯಕ್ರಮಗಳಿಗೆ ತೆರೆದ ಸ್ಥಳಗಳಲ್ಲಿ 150 ಮತ್ತು ಮುಚ್ಚಿದ ಸ್ಥಳಗಳಲ್ಲಿ 75 ಜನರಿಗೆ ಅವಕಾಶ ನೀಡುವುದಾಗಿ ಸರಕಾರವು ಕಳೆದ ವಾರ ತಿಳಿಸಿತ್ತು.

ತುರ್ತು ಸ್ಥಿತಿಗಳನ್ನು ಹೊರತುಪಡಿಸಿ ಸಮಾವೇಶಗಳು ಹಾಗೂ ಸಾಮಾಜಿಕ,ರಾಜಕೀಯ,ಸಾಂಸ್ಕೃತಿಕ ಮತ್ತು ಸಾಮುದಾಯಿಕ ಕಾರ್ಯಕ್ರಮಗಳನ್ನು ಆನ್ ಲೈನ್ ನಲ್ಲಿ ಆಯೋಜಿಸಬಹುದು ಎಂದೂ ಸರಕಾರವು ಸಭೆಯಲ್ಲಿ ತೀರ್ಮಾನಿಸಿದೆ. ಎಲ್ಲ ಕಾರ್ಯಕ್ರಮಗಳನ್ನು ಕೋವಿಡ್ ಶಿಷ್ಟಾಚಾರಗಳನ್ನು ಅನುಸರಿಸಿ ನಡೆಸಬೇಕು ಮತ್ತು ಸಾಧ್ಯವಿದ್ದಾಗ ಸಾರ್ವಜನಿಕ ಸಭೆಗಳನ್ನು ತಪ್ಪಿಸಬೇಕು ಎಂದೂ ಸರಕಾರವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News