ನಾಗಾಲ್ಯಾಂಡ್ ಹತ್ಯೆ ಪ್ರಕರಣ: ವಿಧಿವಿಜ್ಞಾನ ವರದಿ ಸ್ವೀಕರಿಸಿದ ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿರುವ ಎಸ್ಐಟಿ‌

Update: 2022-01-14 17:50 GMT

ಕೋಹಿಮಾ, ಜ. 14: ಕಳೆದ ವರ್ಷ ಡಿಸೆಂಬರ್ 4 ಹಾಗೂ 5ರಂದು ಮೊನ್ ಜಿಲ್ಲೆಯಲ್ಲಿ ಭದ್ರತಾ ಪಡೆ 14 ಮಂದಿ ನಾಗರಿಕರನ್ನು ಹತ್ಯೆಗೈದ ಪ್ರಕರಣದ ತನಿಖೆ ನಡೆಸಲು ನಾಗಾಲ್ಯಾಂಡ್ ಸರಕಾರ ರೂಪಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ವಿಧಿವಿಜ್ಞಾನದ ವರದಿ ಲಭಿಸಿದ ಬಳಿಕ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ‌

ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ 31 ಸೇನಾ ಯೋಧರು ಸೇರಿದಂತೆ 37 ಮಂದಿ ಭದ್ರತಾ ಸಿಬ್ಬಂದಿ ಹಾಗೂ 85 ನಾಗರಿಕರ ತನಿಖೆ ನಡೆಸಲಾಗಿದೆ ಹಾಗೂ ತನಿಖಾ ತಂಡ ಹಲವು ಬಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದೆ ಎಂದು ನಾಗಾಲ್ಯಂಡ್ನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಹಾಗೂ ಸುವ್ಯವಸ್ಥೆ) ಹಾಗೂ ಎಸ್ಐಟಿಯ ಸಂಪೂರ್ಣ ಉಸ್ತುವಾರಿ ಅಧಿಕಾರಿ ಸಂದೀಪ್ ತಮ್ಗಾಡೆ ತಿಳಿಸಿದ್ದಾರೆ. 

ಘಟನೆ ನಡೆದ ಸ್ಥಳದ ಮಣ್ಣು ಹಾಗೂ ರಕ್ತವನ್ನು ಗುವಾಹತಿ ಹಾಗೂ ಹೈದರಾಬಾದ್ನಲ್ಲಿರುವ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಅದರ ವರದಿಗಾಗಿ ಕಾಯುತ್ತಿದ್ದೇವೆ. ಅದನ್ನು ನಾವು ಆದಷ್ಟು ಬೇಗ ಪಡೆಯಲಿದ್ದೇವೆ. ಅನಂತರ ನಾವು ನ್ಯಾಯಾಲಯಕ್ಕೆ ಸಲ್ಲಿಸಲು ಅಂತಿಮ ವರದಿ ಸಿದ್ಧಪಡಿಸುವುದನ್ನು ಆರಂಭಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ. ಅಂತಿಮ ವರದಿ ಒಂದು ಬಾರಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಬಳಿಕೆ ಪ್ರತಿಯೊಬ್ಬರು ಕೂಡ ಅದರ ಮಾಹಿತಿ ಪಡೆಯಬಹುದು. ಆದರೆ, ಅದಕ್ಕಿಂತ ಮುನ್ನ ಮಾಹಿತಿ ಪಡೆಯುವುದು ಸೂಕ್ತವಲ್ಲ. ಯಾಕೆಂದರೆ ಅದು ಕಾನೂನು ಬಾಹಿರ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News