ಪಂಜಾಬ್: ಫೆಬ್ರವರಿ 14 ರ ಬದಲಿಗೆ ಫೆಬ್ರವರಿ 20ರಂದು ವಿಧಾನಸಭಾ ಚುನಾವಣೆ

Update: 2022-01-17 09:15 GMT

ಹೊಸದಿಲ್ಲಿ: ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಯು ಈ ಮೊದಲು ನಿಗದಿಯಾದಂತೆ ಫೆಬ್ರವರಿ 14 ರ ಬದಲಿಗೆ ಫೆಬ್ರವರಿ 20 ರಂದು ನಡೆಯಲಿದೆ NDTV ವರದಿ ಮಾಡಿದೆ.

ಗುರು ರವಿದಾಸ್ ಜಯಂತಿ ಆಚರಣೆಯ ದೃಷ್ಟಿಯಿಂದ ಮತದಾನವನ್ನು ಮುಂದೂಡುವಂತೆ ಎಲ್ಲಾ ಪಕ್ಷಗಳು ಚುನಾವಣಾ ಆಯೋಗಕ್ಕೆ  ಮನವಿ ಮಾಡಿದ ನಂತರ ಚುನಾವಣಾ ಆಯೋಗವು ಸೋಮವಾರ ಚುನಾವಣೆ ಮುಂದೂಡಲು ನಿರ್ಧರಿಸಿದೆ.

ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಫೆಬ್ರವರಿ 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗುರು ರವಿದಾಸ್ ಜಯಂತಿ ಇರುವ ಕಾರಣಕ್ಕೆ ಕನಿಷ್ಠ ಆರು ದಿನಗಳ ಕಾಲ ಮುಂದೂಡಬೇಕೆಂದು ಒತ್ತಾಯಿಸಿದ್ದರು.

ಪಂಜಾಬ್‌ನ ಜನಸಂಖ್ಯೆಯ ಶೇಕಡಾ 32 ರಷ್ಟಿರುವ ಪರಿಶಿಷ್ಟ ಜಾತಿ ಸಮುದಾಯದ ಪ್ರತಿನಿಧಿಗಳು, ಸಮುದಾಯದ ಹೆಚ್ಚಿನ ಸಂಖ್ಯೆಯ ಜನರು ಫೆಬ್ರವರಿ 10 ರಿಂದ 16 ರವರೆಗೆ ಉತ್ತರ ಪ್ರದೇಶದ ಬನಾರಸ್‌ಗೆ ಭೇಟಿ ನೀಡಲಿದ್ದಾರೆ. ಆಗ ಅವರಿಗೆ ಮತದಾನ ಮಾಡಲು ಸಾಧ್ಯವಾಗದೇ ಇರಬಹುದು ಎಂದು ಪತ್ರದಲ್ಲಿ ಚನ್ನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News