‘ಬಾಹುಬಲಿ’ - ‘ಅನುಷ್ಕ’ ಗೆ ಎರಡನೇ ಕರು

Update: 2022-01-17 14:59 GMT

ಮಂಗಳೂರು : ಪಿಲಿಕುಳ ಜೈವಿಕ ಉದ್ಯಾನವನದ ಕಾಡುಕೋಣ ‘ಬಾಹುಬಲಿ’ ಮತ್ತು ‘ಅನುಷ್ಕ’ ಒಂದು ಗಂಡು ಕರುವಿಗೆ ಜನ್ಮ ನೀಡಿದೆ. ತಾಯಿ ಮತ್ತು ಕರು ಆರೋಗ್ಯಕರವಾಗಿದೆ. ಈ ಹಿಂದೆ 2020 ಸಾಲಿನಲ್ಲಿ ‘ಪಾರೋಲು’ ಎಂಬ ಹೆಣ್ಣು ಕರುವಿಗೆ  ಜನ್ಮ ನೀಡಿತ್ತು.

‘ಬಾಹುಬಲಿ’ ಮತ್ತು ‘ಅನುಷ್ಕ’ ತಮಿಳುನಾಡಿನ ವಂಡಲೂರು ಮೃಗಾಲಯದಿಂದ ಹಾಗೂ ‘ಮಹಿಷ’ ಮತ್ತು ‘ಮಹಿಷಿ’ ಯನ್ನು ಮೈಸೂರು ಮೃಗಾಲಯದಿಂದ ಪ್ರಾಣಿ ವಿನಿಮಯದ ಮುಖೇನ ತರಿಸಲಾಗಿತ್ತು. ಈಗ ಪಿಲಿಕುಳದಲ್ಲಿ ಒಟ್ಟು ಆರು ಕಾಡುಕೊಣಗಳಿವೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕರಾದ ಎಚ್. ಜೆ ಭಂಡಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News