ಸರಕಾರಿ ದಾಖಲೆ ಪ್ರಕಾರ ಕೋವಿಡ್ ಲಸಿಕೆಯ 5 ಡೋಸ್ ತೆಗೆದುಕೊಂಡ ಬಿಹಾರದ ವೈದ್ಯೆ:ತನಿಖೆಗೆ ಆದೇಶ

Update: 2022-01-18 08:34 GMT

ಪಾಟ್ನಾ: ಪಾಟ್ನಾ ಮೂಲದ ಸಿವಿಲ್ ಸರ್ಜನ್‌ಗೆ ಕೋವಿಡ್-19 ಲಸಿಕೆಯ ಐದು ಡೋಸ್ ಗಳನ್ನು ನೀಡಲಾಗಿದೆ ಎಂದು ದಾಖಲೆಗಳಿಂದ ತಿಳಿದುಬಂದ ನಂತರ ಬಿಹಾರ ಸರಕಾರ ತನಿಖೆಗೆ ಆದೇಶಿಸಿದೆ.

ಆದಾಗ್ಯೂ, ನಿಯಮಗಳ ಪ್ರಕಾರ ಮೂರು ಬಾರಿ ಕೊರೋನ ಲಸಿಕೆ  ತೆಗೆದುಕೊಂಡಿದ್ದೇನೆ ಎಂದು ಸಿವಿಲ್ ಸರ್ಜನ್ ಡಾ ವಿಭಾ ಕುಮಾರಿ ಸಿಂಗ್ ಅವರು ಹೇಳಿದ್ದಾರೆ.

ತನ್ನ  ಪ್ಯಾನ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ಬೇರೊಬ್ಬರು ಲಸಿಕೆ ಡೋಸ್ ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಂತೆ ತನಿಖೆ ನಡೆಸಬೇಕೆಂದು ಡಾ.ಸಿಂಗ್ ಒತ್ತಾಯಿಸಿದರು.  

CoWIN ಪೋರ್ಟಲ್ ಪ್ರಕಾರ, ಡಾ. ಸಿಂಗ್ ಅವರು ಜನವರಿ 28, 2021 ರಂದು ಮೊದಲ ಡೋಸ್ ಅನ್ನು ಪಡೆದರು ಹಾಗೂ  ಕಳೆದ ವರ್ಷ ಮಾರ್ಚ್ ವೇಳೆಗೆ ಸಂಪೂರ್ಣ ಲಸಿಕೆಯನ್ನು ಪಡೆದಿದ್ದಾರೆ.

ತನ್ನ ಪ್ಯಾನ್ ಕಾರ್ಡ್ ಮಾಹಿತಿಯನ್ನು ಬಳಸಿಕೊಂಡು ಫೆಬ್ರವರಿ 6, 2021 ರಂದು ಮೂರನೇ ಬಾರಿ ಹಾಗೂ  ಜೂನ್ 17 ರಂದು ನಾಲ್ಕನೇ ಬಾರಿಗೆ ಡೋಸ್ ಪಡೆದಿರುವುದು ಸರಕಾರಿ ದಾಖಲೆಯಿಂದ ತಿಳಿದಮಬಂದಿದೆ. ಡಾ. ಸಿಂಗ್ ಅವರು ಬಳಿಕ ಜನವರಿ 13, 2022 ರಂದು ಮುನ್ನೆಚ್ಚರಿಕೆಯ ಡೋಸ್ ಅನ್ನು ತೆಗೆದುಕೊಂಡರು.

ಸರಕಾರವು ತನಿಖೆಯನ್ನು ಆರಂಭಿಸಿದೆ ಎಂದಿರುವ ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೋಮವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News