ಮಂಗಳೂರು; ಗಿಫ್ಟ್ ಹೆಸರಿನಲ್ಲಿ 2.92 ಲಕ್ಷ ರೂ. ವಂಚನೆ: ದೂರು

Update: 2022-01-18 16:10 GMT

ಮಂಗಳೂರು, ಜ.18: ಅಪರಿಚಿತನೋರ್ವ ಮನೆ ಕಟ್ಟಲು ಹಣ ಮತ್ತು ಗಿಫ್ಟ್ ನೀಡುವುದಾಗಿ ನಂಬಿಸಿ 2.92 ಲಕ್ಷ ರೂ.ವನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಂಡು ವಂಚಿಸಿದ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆನರಾ ಬ್ಯಾಂಕ್‌ನ ಕೂಳೂರು ಶಾಖೆಯಲ್ಲಿ ವ್ಯಕ್ತಿ ಖಾತೆಯನ್ನು ಹೊಂದಿದ್ದು, ಸೆ.20ರಂದು ಈ ವ್ಯಕ್ತಿಯ ಮೊಬೈಲ್‌ಗೆ ಬಂದ ವಾಟ್ಸಾಪ್ ಸಂದೇಶದಲ್ಲಿ ಮನೆ ಕಟ್ಟಲು ಹಣ ಮತ್ತು ಗಿಫ್ಟ್ ನೀಡುವುದಾಗಿ ತಿಳಿಸಲಾಗಿತ್ತು. ಆ ಬಳಿಕ ಅಪರಿಚಿತನು ಆಗಾಗ ಸಂದೇಶ ಕಳುಹಿಸಿ ವ್ಯಕ್ತಿಯ ವಿಶ್ವಾಸ ಗಳಿಸಿದ್ದ. ಅ.5ರಂದು ಕರೆ ಮಾಡಿ ಗಿಫ್ಟ್ ದೆಹಲಿಗೆ ಬಂದಿದೆ. ಅದನ್ನು ಮಂಗಳೂರಿಗೆ ಕಳುಹಿಸಲು 35 ಸಾವಿರ ರೂ. ಕಳುಹಿಸುವಂತೆ ಸೂಚಿಸಿದ್ದಾನೆ. ಅದನ್ನು ನಂಬಿ ವ್ಯಕ್ತಿಯು ಗೂಗಲ್ ಪೇ ಮಾಡಿದ್ದಾರೆ. ಬಳಿಕ ಅಪರಿಚಿತನು ಕರೆ ಮಾಡಿ ನೆದರ್‌ಲ್ಯಾಂಡ್ ಡಾಲರ್ ಪಾವತಿಸಬೇಕೆಂದು ತಿಳಿಸಿದ ಕಾರಣ ಅ.7ರಂದು 97 ಸಾವಿರ ರೂ. ಮತ್ತು ಅ.8ರಂದು 1.60 ಲಕ್ಷ ರೂ. ನೆಫ್ಟ್ ಮಾಡಿದ್ದಾರೆ. ಬಳಿಕ ತಾನು ಮೋಸ ಹೋಗಿರುವುದು ವ್ಯಕ್ತಿಗೆ ತಿಳಿಯಿತು. ಹಾಗೇ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News