×
Ad

5ಜಿ ಸಂವಹನಗಳ ನಿಯೋಜನೆಯ ಹಿನ್ನೆಲೆ: ಅಮೆರಿಕದ ಕಾರ್ಯಾಚರಣೆ ಮೊಟಕುಗೊಳಿಸಿದ ಏರ್ ಇಂಡಿಯಾ

Update: 2022-01-19 11:19 IST

ಹೊಸದಿಲ್ಲಿ: ಅಮೆರಿಕವು  5ಜಿ ಸಂವಹನಗಳನ್ನು ನಿಯೋಜಿಸುತ್ತಿರುವ  ಹಿನ್ನೆಲೆಯಲ್ಲಿ ಏರ್ ಇಂಡಿಯಾ ಭಾರತದಿಂದ ಅಮೆರಿಕಕ್ಕೆ ತನ್ನ ಕಾರ್ಯಾಚರಣೆಯನ್ನು ಮೊಟಕುಗೊಳಿಸಿದೆ.

"ಅಮೆರಿಕದಲ್ಲಿ  5ಜಿ  ಸಂವಹನಗಳ ನಿಯೋಜನೆಯಿಂದಾಗಿ ಭಾರತದಿಂದ ಅಮೆರಿಕಕ್ಕೆ ನಮ್ಮ ಕಾರ್ಯಾಚರಣೆಗಳನ್ನು ಜನವರಿ 19, 2022 ರಿಂದ ವಿಮಾನದ ಪ್ರಕಾರದ ಬದಲಾವಣೆಯೊಂದಿಗೆ ಮೊಟಕುಗೊಳಿಸಲಾಗಿದೆ/ಪರಿಷ್ಕರಿಸಲಾಗಿದೆ. ಈ ನಿಟ್ಟಿನಲ್ಲಿ ಅಪ್ ಡೇಟ್ ಅನ್ನು  ಶೀಘ್ರದಲ್ಲೇ ತಿಳಿಸಲಾಗುವುದು" ಎಂದು ಟ್ವೀಟ್‌ನಲ್ಲಿ ಏರ್ ಇಂಡಿಯಾ ತಿಳಿಸಿದೆ.

ಅಮೆರಿಕ ಸರಕಾರದ  ಪ್ರಸ್ತುತ 5ಜಿ  ರೋಲ್‌ಔಟ್ ಯೋಜನೆಯು ವಾಯುಯಾನದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ ಎಂದು ಯುನೈಟೆಡ್ ಏರ್‌ಲೈನ್ಸ್ ಹೇಳಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News