ವಕೀಲ ಅಮಿತ್ ಪಾಲೇಕರ್ ಆಮ್ ಆದ್ಮಿ ಪಕ್ಷದ ಗೋವಾ ಮುಖ್ಯಮಂತ್ರಿ ಅಭ್ಯರ್ಥಿ: ಅರವಿಂದ ಕೇಜ್ರಿವಾಲ್
Update: 2022-01-19 12:24 IST
ಪಣಜಿ: ವಕೀಲ ಹಾಗೂ ಸಮಾಜ ಸೇವಕ ಅಮಿತ್ ಪಾಲೇಕರ್ ಅವರು ಆಮ್ ಆದ್ಮಿ ಪಕ್ಷದ ಗೋವಾ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷದ ಮುಖ್ಯಸ್ಥ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಘೋಷಿಸಿದ್ದಾರೆ ಎಂದು NDTV ವರದಿ ಮಾಡಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೋವಾದಲ್ಲಿ ಸ್ಪರ್ಧಿಸಲು ಸಜ್ಜಾಗಿದೆ. ಆಮ್ ಆದ್ಮಿ ಪಕ್ಷ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸಂಸದ ಭಗವಂತ ಮಾನ್ ಅವರ ಹೆಸರನ್ನು ಮಂಗಳವಾರ ಘೋಷಿಸಿತ್ತು.