ಕೋವಿಡ್ ಲಸಿಕೆಗೆ ಹೆದರಿ ಮರವೇರಿ ಕುಳಿತ ವ್ಯಕ್ತಿ; ವಿಡಿಯೋ ವೈರಲ್

Update: 2022-01-20 09:51 GMT

ಲಕ್ನೋ: ಕೋವಿಡ್ ಲಸಿಕೆ ಅಭಿಯಾನದಂಗವಾಗಿ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಗ್ರಾಮವೊಂದಕ್ಕೆ ತೆರಳಿದ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಅಲ್ಲಿನ ವ್ಯಕ್ತಿಯೊಬ್ಬ ಮರವನ್ನೇರಿ ಕುಳಿತರೆ ಇನ್ನೊಬ್ಬ ಆರೋಗ್ಯಾಧಿಕಾರಿಯೊಬ್ಬರ ಜತೆ ಸೆಣಸಾಟಕ್ಕಿಳಿದ ವಿಡಿಯೋ ವೈರಲ್ ಆಗಿದೆ.

ಈ ಘಟನಾವಳಿಗಳ ವೀಡಿಯೋ ಸಾಕಷ್ಟು ಕುತೂಹಲ ಕೆರಳಿಸಿದೆ. ಲಸಿಕೆ ಪಡೆಯುವುದಿಲ್ಲವೆಂದು ಹೇಳಿಕೊಂಡು ಮರವನ್ನೇರಿ ಕುಳಿತ ವ್ಯಕ್ತಿಗೆ ಕೆಳಗೆ ಬಾ ಎಂದು ಆರೋಗ್ಯ ಸಿಬ್ಬಂದಿ ಹೇಳಿದಾಗ ಆತ "ನಾನು ಬರುವುದಿಲ್ಲ, ನನಗೆ ಲಸಿಕೆ ಬೇಡ ನನಗೆ ಭಯ,'' ಎಂದು ಹೇಳುತ್ತಾನೆ. ಕೊನೆಗೂ ಮರದಿಂದ ಇಳಿದು ಆತ ಲಸಿಕೆ ಪಡೆದುಕೊಳ್ಳಲು ಒಪ್ಪುತ್ತಾನೆ.

ಇನ್ನೊಂದು ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಅಧಿಕಾರಿಗಳ ಕೈಯ್ಯಿಂದ ತಪ್ಪಿಸಿ ಓಡುತ್ತಾ "ನಾನು ಮತ್ತೆ ಲಸಿಕೆ ಪಡೆದುಕೊಳ್ಳುತ್ತೇನೆ, ಈಗ ಬೇಡ,'' ಎಂದು ಗೋಗರೆಯುತ್ತಾನೆ.

"ಈಗ ತೆಗೆದುಕೊಳ್ಳಿ, ಏಕೆ ಕಾಯುವುದು?,'' ಎಂದು ಅಧಿಕಾರಿಗಳು ಆತನಿಗೆ ಹೇಳುತ್ತಾರೆ. ಈತನಿಗೂ ಕೊನೆಗೆ ಅಧಿಕಾರಿಗಳು ಲಸಿಕೆ ನೀಡುತ್ತಾರೆ.

ಲಸಿಕೆ ಅಭಿಯಾನದ ಸಿಬ್ಬಂದಿ ಕೆಲವು ಕಡೆ ಜನರು ಲಸಿಕೆ ಪಡೆಯಲು ಹೊಂದಿರುವ ಹಿಂಜರಿಕೆಯಿಂದ ಎದುರಿಸುವ ಸಮಸ್ಯೆಗಳನ್ನು ಈ ಘಟನೆಗಳು ಪ್ರತಿಫಲಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News