ವಿಲ್ ಇಲ್ಲದೇ ಇದ್ದರೆ ತಂದೆಯ ಸ್ವಯಾರ್ಜಿತ ಆಸ್ತಿ ಪುತ್ರಿಯರಿಗೆ ಸೇರಬೇಕು: ಸುಪ್ರೀಂ ಕೋರ್ಟ್

Update: 2022-01-21 09:31 GMT

ಹೊಸದಿಲ್ಲಿ: ಯಾವುದೇ ವಿಲ್ ಬರೆಯದೆ ಹಿಂದು ವ್ಯಕ್ತಿಯೊಬ್ಬರು ಮೃತಪಟ್ಟರೆ ಆತನ ಎಲ್ಲಾ ಸ್ವಯಾರ್ಜಿತ ಆಸ್ತಿ ಮತ್ತು ಇತರ ಸೊತ್ತುಗಳ ವಾರೀಸುದಾರರು ಪುತ್ರಿಯರೇ ಆಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.

ಮದ್ರಾಸ್ ಹೈಕೋರ್ಟ್‍ನ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅಪೀಲಿನ ಮೇಲೆ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಮೇಲಿನಂತೆ ಆದೇಶಿಸಿದೆ.

"ಹಿಂದು ವ್ಯಕ್ತಿಯೊಬ್ಬ ವಿಲ್ ಮಾಡದೆಯೇ ಮೃತಪಟ್ಟರೆ ಹಾಗೂ ಆತನ ಆಸ್ತಿ ಸ್ವಯಾರ್ಜಿತವಾಗಿದ್ದರೆ ಅಥವಾ ಕುಟುಂಬದಿಂದ ಪಡೆದ ಪಾಲು ಆಗಿದ್ದರೆ ಅವುಗಳು ಆತನ ಸಹೋದರರ ಪುತ್ರ ಪುತ್ರಿಯರಿಗೆ ಹೋಗುವುದಿಲ್ಲ, ಬದಲು ಆ ವ್ಯಕ್ತಿಯ ಪುತ್ರಿಯೇ ವಾರೀಸುದಾರಳಾಗುತ್ತಾಳೆ ಎಂದು ಜಸ್ಟಿಸ್ ಎಸ್ ಅಬ್ದುಲ್ ನಝೀರ್ ಮತ್ತು ಜಸ್ಟಿಸ್ ಕೃಷ್ಣ ಮುರಾರಿ ಅವರ ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ಬೇರೆ ಯಾವುದೇ ಕಾನೂನುಬದ್ಧ ವಾರೀಸುದಾರರು ಇಲ್ಲದೇ ಇದ್ದಾಗ ಆಸ್ತಿಯ ಮೇಲೆ ಪುತ್ರಿಯ ಹಕ್ಕಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನಡೆಸಿ ತನ್ನ ತೀರ್ಪು ನೀಡಿದೆ.

ಈ ನಿರ್ದಿಷ್ಟ ಪ್ರಕರಣದಲ್ಲಿ ಕೂಡು ಕುಟುಂಬವಿದ್ದರೂ ಮೃತ ವ್ಯಕ್ತಿಗೆ ಏಕೈಕ ಪುತ್ರಿಯಿದ್ದುದರಿಂದ ಆತನ ಎಲ್ಲಾ ಆಸ್ತಿಗೆ ಆಕೆಯೇ ವಾರಸುದಾರಳಾಗುತ್ತಾಳೆ ಎಂದು ಹೇಳಿ ಹೈಕೋರ್ಟಿನ ತೀರ್ಪನ್ನು ಬದಿಗೆ ಸರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News