ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಗ್ಗೆ ಟ್ವೀಟ್: ನಟ ಸಿದ್ಧಾರ್ಥ್ ಗೆ ಚೆನ್ನೈ ಪೊಲೀಸರ ಸಮನ್ಸ್

Update: 2022-01-21 11:01 GMT
ಸಿದ್ಧಾರ್ಥ್, ಸೈನಾ ನೆಹ್ವಾಲ್‌ (Photo: Twitter/@Actor_Siddharth/ PTI)

ಚೆನ್ನೈ: ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ತಮಿಳು ನಟ ಸಿದ್ಧಾರ್ಥ್ ಅವರಿಗೆ ಚೆನ್ನೈ ಪೊಲೀಸರು ಸಮನ್ಸ್ ನೀಡಿದ್ದಾರೆ ಎಂದು ಎಎನ್‌ಐ ಗುರುವಾರ ವರದಿ ಮಾಡಿದೆ.

ಪಂಜಾಬ್‌ನ ಫ್ಲೈಓವರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಹಲವಾರು ನಿಮಿಷಗಳ ಕಾಲ ಸಿಲುಕಿಕೊಂಡಿದೆ ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಕಳವಳ ವ್ಯಕ್ತಪಡಿಸಿದ ಟ್ವೀಟ್‌ಗೆ ಪ್ರತಿಕ್ರಿಯಿಸುವಾಗ ನಟ ನೆಹ್ವಾಲ್‌ ಕುರಿತು ಅಶ್ಲೀಲವಾಗಿ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.

ನಟ ಸಿದ್ಧಾರ್ಥ್‌ಗೆ ಸಮನ್ಸ್ ನೀಡಲಾಗಿದೆ ಎಂದು ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಹೇಳಿದ್ದಾರೆ. "ನಾವು ವಾಸ್ತವವಾಗಿ ಎರಡು ದೂರುಗಳನ್ನು ಸ್ವೀಕರಿಸಿದ್ದೇವೆ ... ನಮಗೆ ಅವರ ಹೇಳಿಕೆ ಮಾತ್ರ ಬೇಕು."ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ಪೊಲೀಸರು "ಹೇಗೆ ಹೇಳಿಕೆ ಪಡೆಯುವುದು ಎಂಬುದರ ಕುರಿತು ಯೋಚಿಸುತ್ತಿದ್ದಾರೆ" ಎಂದು  ಜಿವಾಲ್ ಹೇಳಿದರು.

ಜನವರಿ 12 ರಂದು, ಹೈದರಾಬಾದ್ ಪೊಲೀಸರ ಸೈಬರ್ ಕ್ರೈಮ್ ವಿಭಾಗವು ಸಿದ್ಧಾರ್ಥ್ ಅವರ ಟ್ವೀಟ್‌ಗಾಗಿ ಪ್ರಕರಣವನ್ನು ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News