ಐದು ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಶಿಫಾರಸು ಮಾಡಿಲ್ಲ: ಕೇಂದ್ರ ಆರೋಗ್ಯ ಸಚಿವಾಲಯ

Update: 2022-01-21 13:54 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ,ಜ.21: ಐದು ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಬಳಕೆಯನ್ನು ಶಿಫಾರಸು ಮಾಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಕೋವಿಡ್ ಚಿಕಿತ್ಸೆಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಅದು ಬಿಡುಗಡೆಗೊಡಿಸಿದೆ.

6ರಿಂದ 11 ವರ್ಷ ಪ್ರಾಯದವರೆಗಿನ ಮಕ್ಕಳು ಪೋಷಕರ ನೇರ ಉಸ್ತುವಾರಿಯಡಿ ಮಾಸ್ಕ್ ಅನ್ನು ಸುರಕ್ಷಿತವಾಗಿ ಬಳಸುವ ತಮ್ಮ ಸಾಮರ್ಥ್ಯವನ್ನು ಅವಲಂಬಿಸಿ ಅದನ್ನು ಧರಿಸಬಹುದು. 12 ವರ್ಷ ಮೇಲ್ಪಟ್ಟ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಅದು ತಿಳಿಸಿದೆ ಎಂದು scroll.in ವರದಿ ಮಾಡಿದೆ.

ಸೋಂಕಿನ ತೀವ್ರತೆ ಏನೇ ಇದ್ದರೂ 18 ವರ್ಷದೊಳಗಿನ ಕೋವಿಡ್ ರೋಗಿಗಳಿಗೆ ಆ್ಯಂಟಿವೈರಲ್ ಗಳ ಬಳಕೆಯನ್ನು ಶಿಫಾರಸು ಮಾಡಿಲ್ಲ.
18 ವರ್ಷದೊಳಗಿನ ಕೋವಿಡ್ ರೋಗಿಗಳಿಗೆ ಸ್ಟಿರಾಯ್ಡ್ ಚಿಕಿತ್ಸೆ ಕುರಿತಂತೆ ಸಚಿವಾಲಯವು, ಸೂಕ್ತ ಸಮಯದಲ್ಲಿ, ಸೂಕ್ತ ಪ್ರಮಾಣದಲ್ಲಿ ಮತ್ತು ಸರಿಯಾದ ಅವಧಿಗೆ ಸ್ಟಿರಾಯ್ಡಿಗಳನ್ನು ನೀಡಬೇಕು ಎಂದಿದೆ.

ಲಕ್ಷಣಗಳು ಕಾಣಿಸಿಕೊಂಡ ಬಳಿಕ ಮೊದಲ ಮೂರರಿಂದ ಐದು ದಿನಗಳ ಕಾಲ ಸ್ಟಿರಾಯ್ಡ್ ಬಳಕೆಯನ್ನು ನಿವಾರಿಸಬೇಕು. ಅವುಗಳನ್ನು ಬಳಸಿದರೂ ಚೇತರಿಕೆಯನ್ನು ಅನುಸರಿಸಿ 10ರಿಂದ 14 ದಿನಗಳಲ್ಲಿ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
 ಲಕ್ಷಣರಹಿತ, ಸೌಮ್ಯ, ಮಧ್ಯಮ ಮತ್ತು ತೀವ್ರ ಲಕ್ಷಣಗಳಿರುವ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸಾ ವಿಧಾನಗಳನ್ನು ಅದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News