ಇಂಡಿಯಾ ಗೇಟ್‌ನಲ್ಲಿ ನೇತಾಜಿಯವರ ಭವ್ಯ ಪ್ರತಿಮೆ ಸ್ಥಾಪನೆ: ಪ್ರಧಾನಿ ಮೋದಿ

Update: 2022-01-21 15:50 GMT

ಹೊಸದಿಲ್ಲಿ,ಜ.21: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷಚಂದ್ರ ಬೋಸ್ ಅವರಿಗೆ ಭಾರತದ ಋಣದ ಸಂಕೇತವಾಗಿ ದಿಲ್ಲಿಯ ಇಂಡಿಯಾ ಗೇಟ್‌ನಲ್ಲಿ ಅವರ ಭವ್ಯ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಪ್ರಕಟಿಸಿದರು.

ಗ್ರಾನೈಟ್ ಶಿಲೆಯಿಂದ ನಿರ್ಮಿಸಲಾಗುವ ಪ್ರತಿಮೆಯು ಪೂರ್ಣಗೊಳ್ಳುವವರೆಗೂ ಅವರ ಹೊಲೊಗ್ರಾಮ್ ಪ್ರತಿಮೆಯು ಇಂಡಿಯಾ ಗೇಟ್‌ನಲ್ಲಿ ಇರಲಿದೆ ಎಂದ ಮೋದಿ,ಆಝಾದ್ ಹಿಂದ್ ಫೌಜ್‌ನ ಸ್ಥಾಪಕ ನೇತಾಜಿಯವರ 125ನೇ ಜನ್ಮದಿನವಾದ ಜ.23ರಂದು ಹೊಲೊಗ್ರಾಮ್ ಪ್ರತಿಮೆಯನ್ನು ತಾನು ಅನಾವರಣಗೊಳಿಸುವುದಾಗಿ ತಿಳಿಸಿದರು.

V V ಗ್ರಾನೈಟ್ ಪ್ರತಿಮೆಯು 28 ಅಡಿ ಎತ್ತರ ಮತ್ತು ಆರು ಅಡಿ ಅಗಲವನ್ನು ಹೊಂದಿದ್ದು,ಕಿಂಗ್ ಜಾರ್ಜ್ ಪ್ರತಿಮೆಯಿದ್ದ ಸ್ಥಳದಲ್ಲಿ ಅದನ್ನು ಸ್ಥಾಪಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. 1968ರಲ್ಲಿ ಕಿಂಗ್ ಜಾರ್ಜ್ ಪ್ರತಿಮೆಯನ್ನು ಅಲ್ಲಿಂದ ತೆಗೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News