×
Ad

ಯಶವಂತಪುರ-ಕಾರವಾರ ರೈಲಿನ ಕರಾವಳಿಯ ವೇಳೆ ಬದಲು

Update: 2022-01-21 22:24 IST

ಉಡುಪಿ, ಜ.21: ಬೆಂಗಳೂರಿನ ಯಶವಂತಪುರದಿಂದ ಕಾರವಾರಕ್ಕೆ ವಾರದಲ್ಲಿ ಮೂರು ದಿನ ಹಗಲು ಹೊತ್ತಿನಲ್ಲಿ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನ ಮಂಗಳೂರು ಜಂಕ್ಷನ್‌ನಿಂದ ಕಾರವಾರದವರೆಗಿನ ಸಂಚಾರದ ಸಮಯದಲ್ಲಿ ಬದಲಾವಣೆಯಾಗಿದೆ. ಇದು ಜ.24ರಿಂದ ಜಾರಿಗೆ ಬರಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಇದೀಗ ಮಂಗಳೂರು ಜಂಕ್ಷನ್ ಹಾಗೂ ಕಾರವಾರ ನಡುವೆ ಈ ರೈಲು ವಿದ್ಯುತ್ ರೈಲಾಗಿ ಸಂಚರಿಸುತ್ತಿದೆ. ರೈಲು ಬೆಳಗ್ಗೆ 7 ಗಂಟೆಗೆ ಯಶವಂತಪುರದಿಂದ ಹೊರಡಲಿದ್ದು, ಈ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಮಂಗಳೂರು ಜಂಕ್ಷನ್‌ನಿಂದ ಮುಂದೆ ಕಾರವಾರಕ್ಕೆ ಸಂಚರಿಸುವ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಈ ಹಿಂದೆ ರಾತ್ರಿ 11:30ಕ್ಕೆ ಕಾರವಾರ ತಲುಪುತಿದ್ದ ರೈಲು ಇನ್ನು 10:30ಕ್ಕೆ ತಲುಪಲಿದೆ.

ಕೆಳಗಿನ ಪಟ್ಟಿಯಲ್ಲಿ ರೈಲು ಈಗ ಆಯಾ ನಿಲ್ದಾಣ ತಲುಪುವ ಸಮಯ ಹಾಗೂ ಆವರಣದಲ್ಲಿ ಹಿಂದೆ ತಲುಪುತಿದ್ದ ಸಮಯ ಮತ್ತು ನಿರ್ಗಮನ ಸಮಯವನ್ನು ನೀಡಲಾಗಿದೆ.

ಯಶವಂತಪುರದಿಂದ ನಿಗರ್ಮನ ಬೆಳಗ್ಗೆ 7:00 (7:00), ಮಂಗಳೂರು ಜಂಕ್ಷನ್: ಸಂಜೆ 4:35/4:45(4:40/5:00), ಸುರತ್ಕಲ್: 5:30/5:32 (5:52/5:54), ಉಡುಪಿ: 6:00/6:02 (6:24/6:26), ಕುಂದಾಪುರ: 6:30/6:32 (6:50/6:52), ಮೂಕಾಂಬಿಕಾ ರೋಡ್ ಬೈಂದೂರು: 7:04/7:06 (7:32/7:34).

ಭಟ್ಕಳ: 7:28/7:30 (7:46/7:48), ಮುರ್ಡೇಶ್ವರ: 7:44/7:46 ( 8:02/8:04), ಹೊನ್ನಾವರ: 8:10/8:12 (8:30/8:32), ಕುಮಟ: 8:40/8:42 (8:48/8:50), ಗೋಕರ್ಣ ರೋಡ್: 9:02/9:04 (9:10/9:12), ಅಂಕೋಲ: 9:22/9:24 (9:22/9:24), ಕಾರವಾರ: 10:30 (11:20).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News