ಬಾಂಬೆ ಹೈಕೋರ್ಟ್‌ನಲ್ಲಿ ಆತಂಕ ಸೃಷ್ಟಿಸಿದ ಹಾವು

Update: 2022-01-21 17:44 GMT
Photo : PTI

ಮುಂಬೈ, ಜ. 21: ಬಾಂಬೆ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಆರ್. ಬೋರ್ಕರ್ ಅವರ ಚೇಂಬರ್‌ನಲ್ಲಿ ಶುಕ್ರವಾರ ಬೆಳಗ್ಗೆ ಹಾವೊಂದು ಕಂಡು ಬಂದು ಆತಂಕ ಸೃಷ್ಟಿಸಿತು. ಅನಂತರ ಹಾವನ್ನು ಹಿಡಿದು ರಕ್ಷಿಸಲಾಯಿತು. ಹಾವು ವಿಷಪೂರಿತವೇ ಎಂಬುದು ಇದುವರೆಗೆ ತಿಳಿದು ಬಂದಿಲ್ಲ.

ಕೆಲವು ಪ್ರಕರಣಗಳನ್ನು ಭೌತಿಕವಾಗಿ ಹಾಗೂ ಇನ್ನು ಕೆಲವು ಪ್ರಕರಣಗಳನ್ನು ವರ್ಚುವಲ್ ಆಗಿ ವಿಚಾರಣೆ ನಡೆಸುತ್ತಿದ್ದುದರಿಂದ ಹಾವು ಕಂಡು ಬಂದ ಸಂದರ್ಭ ನ್ಯಾಯಾಲಯದಲ್ಲಿ ಹೆಚ್ಚು ಜನರು ಇರಲಿಲ್ಲ. ಚಿತ್ರವೊಂದರಲ್ಲಿ ಹಾವು ಹಿಡಿಯುವ ವ್ಯಕ್ತಿ ಕೈಯಲ್ಲಿ ಹಾವು ಹಿಡಿದುಕೊಂಡು ಛೇಂಬರ್‌ನ ಹೊರಗೆ ನಿಂತಿರುವುದು, ಅಧಿಕಾರಿಗಳು ಸೇರಿದಂತೆ ಹಲವರು ಅವರನ್ನು ಸುತ್ತುವರಿದು ಫೋಟೊ ಕ್ಲಿಕ್ಕಿಸುತ್ತಿರುವುದು ಕಂಡು ಬಂದಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಂಬೆ ಉಚ್ಚ ನ್ಯಾಯಾಲಯ ಭೌತಿಕ ಹಾಗೂ ವರ್ಚುವಲ್ ಮಾದರಿಯಲ್ಲಿ ವಿಚಾರಣೆ ನಡೆಸಲು ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News