×
Ad

ಉಡುಪಿ : ಜ. 26ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಮೆರವಣಿಗೆ

Update: 2022-01-24 12:46 IST

ಉಡುಪಿ, ಜ.24: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ಧ ಚಿತ್ರಕ್ಕೆ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ ಗೆ ಅವಕಾಶ ಸಿಗದಿರುವುದು ಕಾರಣಕ್ಕಾಗಿ ಜ. 26ರಂದು ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಮೆರವಣಿಗೆಗೆ ಬಜರಂಗದಳ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕರಾದ ಸುನೀಲ್‌ ಕೆ. ಆರ್‌ ತಿಳಿಸಿದ್ದಾರೆ.

ಅಸಮಾನತೆಯ ವಿರುದ್ಧ ಹೋರಾಟ ಮಾಡಿದ, ದೇಶ ಕಂಡ ಮಹಾನ್ ಸಂತ ಪೂಜನೀಯ ಬ್ರಹ್ಮಶ್ರೀ ನಾರಾಯಣಗುರುಗಳು, ಸಮಾಜದಲ್ಲಿ ಅಸ್ಪರ್ಶತೆಯ ನಿವಾರಣೆಗೋಸ್ಕರ, ಸಮಾಜದಲ್ಲಿನ ಮೆಲ್ಜಾತಿ ಕೀಲ್ಜಾತಿ ಬೇಧಭಾವವನ್ನು ದೂರಮಾಡಲು ಹೋರಾಟ ಮಾಡಿದ ಮಹಾನ್ ಯೋಗಿಯಾಗಿದ್ದು   26 ಜನವರಿಯಂದು  ನಡೆಯಲಿರುವ ಸ್ಥಬ್ಧಚಿತ್ರದ ಮೆರವಣಿ ಕಾರ್ಯಕ್ರಮಕ್ಕೆ ಬಜರಂಗದಳ  ಬೆಂಬಲ ಸೂಚಿಸುತ್ತದೆ. ಮತ್ತು ಸಂಘಟನೆಯ ಎಲ್ಲಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇರಳದ ಕಮ್ಯುನಿಸ್ಟ್‌ ಸರಕಾರದ ಕುತಂತ್ರದಿಂದಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ಧಚಿತ್ರಕ್ಕೆ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ ಗೆ ಅವಕಾಶ ಸಿಕ್ಕಿಲ್ಲ ಎಂದೂ ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News