́ʼಬಿಜೆಪಿ ನಾಯಕರಿಗೆ ಪ್ರವೇಶವಿಲ್ಲʼ ಎಂಬ ನೋಟಿಸ್ ಹಾಕಿದ ಉತ್ತರಪ್ರದೇಶದ ಗ್ರಾಮಸ್ಥರು !

Update: 2022-01-24 13:36 GMT

ಗಾಝಿಯಾಬಾದ್:‌ ರೈತರ ಪ್ರತಿಭಟನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ ಆಡಳಿತ ಪಕ್ಷದೊಂದಿಗನ ವಿರೋಧ ಇನ್ನೂ ಕಡಿಮೆಯಾಗಿಲ್ಲ. ಉತ್ತರಪ್ರದೇಶದ ಶಾಮಿಲಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಗ್ರಾಮಕ್ಕೆ ಆಗಮಿಸಿ ಪ್ರಚಾರಕಾರ್ಯ ಕೈಗೊಳ್ಳುವುದಕ್ಕೆ ಬಹಿಷ್ಕಾರ ಹಾಕಿದ್ದಾರೆ ಎಂದು deccanherald.com ವರದಿ ಮಾಡಿದೆ.

ಲಯನ್‌ ಗ್ರಾಮದಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಗೇಟ್‌ ಹಾಗೂ ಬಾಗಿಲುಗಳಲ್ಲಿ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಕಾರ್ಯಕರ್ತರಿಗೆ ಮಾತ್ರ ಅವಕಾಶವಿದೆ ಎಂದು ಸೂಚನೆಯ ನೋಟಿಸುಗಳನ್ನು ಅಂಟಿಸಿದ್ದು, ಬಿಜೆಪಿಯವರಿಗೆ ಸ್ವಾಗತವಿಲ್ಲ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ಸ್ಥಳೀಯ ಬಿಜೆಪಿ ಶಾಸಕ ತೇಜಿಂದರ್ ನರ್ವಾಲ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐದು ವರ್ಷಗಳ ಹಿಂದೆ ಆಯ್ಕೆಯಾಗಿ ಈ ಶಾಸಕ ಒಮ್ಮೆಯೂ ಇಲ್ಲಿಗೆ ಬಂದಿಲ್ಲ, ರೈತರ ಹೋರಾಟದ ಸಂದರ್ಭದಲ್ಲೂ ನಮ್ಮೊಂದಿಗೆ ಮಾತನಾಡಲು ತಲೆ ಕೆಡಿಸಿಕೊಂಡಿಲ್ಲ, ಐದು ವರ್ಷಕ್ಕೊಮ್ಮೆ ಬರುವವರಿಗೆ ನಾವೇಕೆ ಮತ ಹಾಕಬೇಕು? ಎಂದು ಸ್ಥಳೀಯ ರೈತ ರಾಧೇಯ ಶ್ಯಾಮ್ ತ್ಯಾಗಿ ಪ್ರಶ್ನಿಸುತ್ತಾರೆ.

ಆರ್‌ಎಲ್‌ಡಿ ಕಾರ್ಯಕರ್ತರು ನಿಯಮಿತವಾಗಿ ಗ್ರಾಮಕ್ಕೆ ಭೇಟಿ ನೀಡುತ್ತಿರುವುದರಿಂದ ಮತ್ತು ವರ್ಷವಿಡೀ ನಡೆದ ಆಂದೋಲನದಲ್ಲಿ ಸ್ಥಳೀಯ ಜನರಿಗೆ ತಮ್ಮ ಬೆಂಬಲದ ಭರವಸೆ ನೀಡಿದ್ದರಿಂದ ಸ್ವಾಗತಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News