ಗಣರಾಜ್ಯೋತ್ಸವ: ಚುನಾವಣಾ ರಾಜ್ಯಗಳಾದ ಮಣಿಪುರ, ಉತ್ತರಾಖಂಡದ ಉಡುಪಿನಲ್ಲಿ ಮಿಂಚಿದ ಪ್ರಧಾನಿ ಮೋದಿ

Update: 2022-01-26 10:24 GMT
ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ: ಭಾರತದ 73 ನೇ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಸಾಂಪ್ರದಾಯಿಕ ಟೋಪಿ ಹಾಗೂ  ಮಣಿಪುರದ ಶಾಲು ಧರಿಸಿ ಗಮನ ಸೆಳೆದರು.

ಮುಂದಿನ ತಿಂಗಳು ಮತದಾನ ನಡೆಯಲಿರುವ ಪ್ರಮುಖ ಐದು ರಾಜ್ಯಗಳಲ್ಲಿ ಉತ್ತರಾಖಂಡ ಹಾಗೂ  ಮಣಿಪುರ ಕೂಡ  ಸೇರಿವೆ.

‘’ಕ್ಯಾಪ್ ಅನ್ನು "ಬ್ರಹ್ಮಕಮಲ" ದಿಂದ ಅಲಂಕರಿಸಲಾಗಿದೆ. ಇದು ಉತ್ತರಾಖಂಡದ ರಾಜ್ಯ ಪುಷ್ಪವಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ ಮಾಡಿದ್ದಾರೆ.

ತಮ್ಮ ರಾಜ್ಯದ ಬಗ್ಗೆ ಪ್ರಧಾನಿ ಮೋದಿಯವರ ಇಂಗಿತಕ್ಕೆ ಹೆಮ್ಮೆ ವ್ಯಕ್ತಪಡಿಸಿದ ಧಾಮಿ "ಉತ್ತರಾಖಂಡದ 1.25 ಕೋಟಿ ಜನರ ಪರವಾಗಿ ನಾನು ಪ್ರಧಾನ ಮಂತ್ರಿಗೆ ಧನ್ಯವಾದ ಹೇಳುತ್ತೇನೆ’’ ಎಂದು ಟ್ವೀಟಿಸಿದ್ದಾರೆ.

ಕೇದಾರನಾಥ ಪವಿತ್ರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಪ್ರಧಾನಿ ಮೋದಿ ಬ್ರಹ್ಮಕಮಲ ಹೂವನ್ನು ಬಳಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಮಂತ್ರಿಯವರು ಸಾಂಪ್ರದಾಯಿಕ ಮಣಿಪುರಿ ಶಾಲು "ಲೈರಮ್ ಫೈ" ಅನ್ನು ಹೆಚ್ಚಾಗಿ ಧರಿಸುತ್ತಾರೆ. ಕೈಯಿಂದ ನೇಯ್ದ ಶಾಲು ಮಣಿಪುರದ ಮೆಟೈ ಬುಡಕಟ್ಟಿನ ವಿಶಿಷ್ಟವಾಗಿದೆ.

ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಹಾಗೂ  ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News