ಗಣರಾಜ್ಯೋತ್ಸವದಂದು ಟ್ವಿಟರ್ ನಲ್ಲಿ ಅಮರಜ್ಯೋತಿ ಫೋಟೋ ಹಂಚಿಕೊಂಡ ರಾಹುಲ್ ಗಾಂಧಿ

Update: 2022-01-26 09:37 GMT

ಹೊಸದಿಲ್ಲಿ: ಅಮರ್ ಜವಾನ್ ಜ್ಯೋತಿ ಅಥವಾ ಇಂಡಿಯಾ ಗೇಟ್‌ನಲ್ಲಿರುವ ಶಾಶ್ವತ ಜ್ವಾಲೆಯನ್ನು ಎತ್ತಿ ತೋರಿಸುವ ಚಿತ್ರದೊಂದಿಗೆ ರಾಹುಲ್ ಗಾಂಧಿಯವರು ಬುಧವಾರ  ಟ್ವಿಟರ್‌ನಲ್ಲಿ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.  

"1950 ರಲ್ಲಿ ಗಣರಾಜ್ಯೋತ್ಸವದಂದು, ನಮ್ಮ ದೇಶವು ಆತ್ಮವಿಶ್ವಾಸದಿಂದ ಸರಿಯಾದ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇಟ್ಟಿತು. ಸತ್ಯ ಹಾಗೂ ಸಮಾನತೆಯ ಮೊದಲ ಹೆಜ್ಜೆಗೆ ನಮಸ್ಕಾರಗಳು. ಗಣರಾಜ್ಯೋತ್ಸವದ ಶುಭಾಶಯಗಳು. ಜೈ ಹಿಂದ್" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

50 ವರ್ಷಗಳ ನಂತರ ಇಂಡಿಯಾ ಗೇಟ್‌ನಲ್ಲಿ ನಂದಿಸಲಾದ ಶಾಶ್ವತ ಜ್ಯೋತಿಯ ಚಿತ್ರದೊಂದಿಗೆ ರಾಹುಲ್ ಅವರು ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ. 400 ಮೀಟರ್ ದೂರದಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ಅಮರ್ ಜ್ಯೋತಿಯನ್ನು ಇತ್ತೀಚೆಗೆ ಕೇಂದ್ರ ಸರಕಾರವು ವಿಲೀನಗೊಳಿಸಿತ್ತು.

ಈ ಕ್ರಮವನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸೇರಿದಂತೆ ಹಲವರು ಟೀಕಿಸಿದ್ದಾರೆ.

"ನಮ್ಮ ವೀರ ಯೋಧರಿಗಾಗಿ ಉರಿಯುತ್ತಿದ್ದ ಅಮರ ಜ್ಯೋತಿಯು ಇಂದು ಆರಿರುವುದು ಅತೀವ ದುಃಖದ ಸಂಗತಿ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News