ಬಿಜೆಪಿಯು ʼಕಾಂಗ್ರೆಸ್‌ ಯುಕ್ತʼ ಪಕ್ಷವಾಗಿದೆ: ಶಶಿ ತರೂರ್ ತರಾಟೆ

Update: 2022-01-26 12:29 GMT

ಲಕ್ನೊ: ಉತ್ತರ ಪ್ರದೇಶ ಚುನಾವಣೆಯ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕ ಆರ್‌ಪಿಎನ್ ಸಿಂಗ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದ ನಂತರ ಪಕ್ಷದ ಹಿರಿಯ ನಾಯಕ ಹಾಗೂ  ಲೋಕಸಭಾ ಸಂಸದ ಶಶಿ ತರೂರ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.  ಇದು ಕಾಂಗ್ರೆಸ್ ನಾಯಕರಿಂದ ಕೂಡಿದ ಪಕ್ಷವಾಗಿದೆ ಎಂದು ಹೇಳಿದ್ದಾರೆ.

ಶಶಿ ತರೂರ್ ಅವರು "ಕಾಂಗ್ರೆಸ್-ಯುಕ್ತ ಬಿಜೆಪಿ (ಕಾಂಗ್ರೆಸ್ ನಾಯಕರನ್ನು ಒಳಗೊಂಡ ಬಿಜೆಪಿ)" ಎಂಬ ಪದವನ್ನು ಬಳಸಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ''ಕಾಂಗ್ರೆಸ್ ಮುಕ್ತ ಭಾರತ'' ಎಂಬ ಘೋಷಣೆಯ ದಾಟಿಯಲ್ಲಿದೆ.

 “ಅವನು ತನ್ನ ಮನೆಯನ್ನು ತೊರೆಯುತ್ತಿದ್ದಾನೆ. ಬಹುಶಃ ಅವನಿಗೆ ಕನಸುಗಳಿರಬಹುದು. ಈಗ ಅಲ್ಲಿರುವವರೆಲ್ಲರೂ ನಮ್ಮವರೇ ಆಗಿದ್ದಾರೆ’’ ಎಂದು ಹಿಂದಿಯಲ್ಲಿ ತರೂರ್ ಕಾವ್ಯಾತ್ಮಕವಾಗಿ ಟ್ವೀಟ್‌ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News