ಬಾಲಿವುಡ್ ಚಿತ್ರ ನಿರ್ಮಾಪಕನ ದೂರು: ಗೂಗಲ್ ಸಿಇಒ ಸುಂದರ್ ಪಿಚೈ, ಇತರ 5 ಮಂದಿ ವಿರುದ್ಧ ಎಫ್‌ಐಆರ್

Update: 2022-01-26 12:19 GMT
ಗೂಗಲ್ ಸಿಇಒ ಸುಂದರ್ ಪಿಚೈ

ಮುಂಬೈ: ಬಾಲಿವುಡ್ ಚಿತ್ರ ತಯಾರಕ, ನಿರ್ದೇಶಕ ಮತ್ತು ನಿರ್ಮಾಪಕ ಸುನೀಲ್ ದರ್ಶನ್ ಅವರು ತಮ್ಮ ಚಿತ್ರವೊಂದರ ಕಾಪಿರೈಟ್ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಐದು ಮಂದಿ ಇತರರ ವಿರುದ್ಧ ದಾಖಲಿಸಿರುವ ದೂರಿನ ಆಧಾರದಲ್ಲಿ ಪಿಚೈ ಮತ್ತು ಗೂಗಲ್ ಸಂಸ್ಥೆಯ ಐದು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮುಂಬೈ ನ್ಯಾಯಾಲಯ ಆದೇಶಿಸಿದೆ. ಇದರಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು indiatoday.in ವರದಿ ಮಾಡಿದೆ.

ಸುನೀಲ್ ಅವರು ತಾವು 2017ರಲ್ಲಿ ನಿರ್ಮಿಸಿದ ಚಿತ್ರ `ಏಕ್ ಹಸೀನಾ ಥೀ ಏಕ್ ದಿವಾನಾ ಥಾ' ಇದರ ಕಾಪಿರೈಟ್ ಅನ್ನು ಯಾರಿಗೂ ಮಾರಾಟ ಮಾಡದೇ ಇದ್ದರೂ ಅದನ್ನು ಯುಟ್ಯೂಬ್‌ನಲ್ಲಿ ಹಲವರು ಅಪ್‌ಲೋಡ್ ಮಾಡಿದ್ದಾರೆ. ಈ ಕುರಿತು ಯುಟ್ಯೂಬ್‌ಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ಈ ರೀತಿ ಕಾನೂನುಬಾಹಿರವಾಗಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಪರಿಣಾಮ ಚಿತ್ರದ ಮಾರುಕಟ್ಟೆ ಮೌಲ್ಯ  ಬಹಳಷ್ಟು ಕಡಿಮೆಯಾಗಿದೆ. ಗೂಗಲ್‌ಗೆ ಈ ಹಿಂದೆ ದೂರು ನೀಡಿದ್ದರೂ ಪ್ರಯೋಜನವಾಗದೇ ಇದ್ದುದರಿಂದ ಈಗ ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದು ಸುನೀಲ್ ಅವರ ವಕೀಲರು ಹೇಳಿದ್ದಾರೆ.

ಈ ಪ್ರಕರಣವನ್ನು ಕಾಪಿರೈಟ್ ಕಾಯಿದೆ 1957 ಇದರ ಸೆಕ್ಷನ್ 51, 63 ಮತ್ತು 69 ಅನ್ವಯ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News