ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನಾ ಹಸ್ತಾಂತರಿಸಲಿದೆ: ಕೇಂದ್ರ

Update: 2022-01-26 12:40 GMT
Photo: Twitter

ಹೊಸದಿಲ್ಲಿ: ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ 17 ವರ್ಷದ ಯುವಕನನ್ನು ಬಿಡುಗಡೆಗೊಳಿಸುವ ಸುಳಿವನ್ನು ಚೀನಾ ನೀಡಿದೆ  ಎಂದು ಹೇಳಿರುವ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರೆಣ್ ರಿಜಿಜು,  ಆತನ ಬಿಡುಗಡೆಯ ದಿನಾಂಕ ಮತ್ತು ಸಮಯವನ್ನು ಚೀನಾ ಶೀಘ್ರ ನೀಡಲಿದೆ ಎಂದಿದ್ದಾರೆ. ಆತನನ್ನು ಬಿಡುಗಡೆಗೊಳಿಸಬೇಕಾದ ಸ್ಥಳದ ಕುರಿತು ಚೀನಾ ಸಲಹೆಯನ್ನೂ ಕೇಳಿದೆ, ಚೀನಾದಲ್ಲಿ ಹವಾಮಾನ ವೈಪರೀತ್ಯದಿಂದ ಬಿಡುಗಡೆ ವಿಳಂಬಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.

"ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ನಡುವೆ ಗಣರಾಜ್ಯೋತ್ಸವ ದಿನದಂದು ಹಾಟ್‍ಲೈನ್ ವಿನಿಮಯ ನಡೆದಿದೆ. ಈ ಸಂದರ್ಭ ಚೀನಾದ ಸೇನೆ ನಮ್ಮ ನಾಗರಿಕನ ಹಸ್ತಾಂತರ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿ ಬಿಡುಗಡೆಯ ಸ್ಥಳದ ಕುರಿತು ಸಲಹೆ ಕೇಳಿದೆ. ದಿನಾಂಕ ಮತ್ತು ಸಮಯವನ್ನು ಅವರು ಶೀಘ್ರ ತಿಳಿಸಬಹುದು" ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ನಾಪತ್ತೆಯಾದ ಯುವಕನ ಕುರಿತು ವಿವರಗಳು ಮತ್ತು ಆತನ ಛಾಯಾಚಿತ್ರವನ್ನು ಚೀನಾ ಸೇನೆಯೊಂದಿಗೆ ಈ ಹಿಂದೆ ಭಾರತೀಯ ಸೇನೆ  ನೀಡಿತ್ತು ಎಂದು ಅವರು ಹೇಳಿದ್ದಾರೆ.

ಯಾಂಗ್ ಜಿಲ್ಲೆಯ ಜಿಡೋ ಗ್ರಾಮದ 17 ವರ್ಷದ ಯುವಕ ಮಿರಮ್ ತರೋನ್ ಜನವರಿ 18ರಂದು ಬಿಷಿಂಗ್ ಪ್ರದೇಶದ ಶಿಯುಂಗ್ ಲಾ ಎಂಬಲ್ಲಿಂದ ನಾಪತ್ತೆಯಾಗಿದ್ದ. ಆತನ ಜತೆಗಿದ್ದ ಜಾನಿ ಯೆಯಿಂಗ್ ಎಂಬಾತ ತಪ್ಪಿಸಿಕೊಂಡಿದ್ದನಲ್ಲದೆ ಮಿರಮ್‍ನನ್ನು ಪಿಎಲ್‍ಎ ವಶಪಡಿಸಿಕೊಂಡಿದೆ ಎಂದು ತಿಳಿಸಿದ್ದ.

ಇದನ್ನೂ ಓದಿ: ಕಾಣೆಯಾದ ಅರುಣಾಚಲದ ಬಾಲಕನನ್ನು ಪತ್ತೆ ಹಚ್ಚಿದ ಚೀನಾ ಸೇನೆ, ಕರೆತರುವ ಪ್ರಕ್ರಿಯೆ ಆರಂಭ: ವರದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News