ಇಂದು ವಿಮಾನದೊಳಗೆ ವಿಶೇಷ ಪ್ರಕಟಣೆ ಆಲಿಸಲಿರುವ ಏರ್ ಇಂಡಿಯಾ ಪ್ರಯಾಣಿಕರು

Update: 2022-01-28 05:39 GMT

ಹೊಸದಿಲ್ಲಿ: ಏರ್ ಇಂಡಿಯಾ ವಿಮಾನಗಳಲ್ಲಿ ಶುಕ್ರವಾರದಂದು ಪ್ರಯಾಣಿಸಲಿರುವ ಪ್ರಯಾಣಿಕರು ವಿಮಾನದಲ್ಲಿ ಪ್ರಕಟಣೆಯ ಸಮಯದಲ್ಲಿ ಏರ್ ಇಂಡಿಯಾವನ್ನು ಟಾಟಾ ಸಮೂಹವು ಸ್ವಾಧೀನಪಡಿಸಿಕೊಂಡಿರುವ ವಿಚಾರವನ್ನು ಕೇಳುತ್ತಾರೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

ಭಾರತ ಸರಕಾರವು ಗುರುವಾರ ಮಧ್ಯಾಹ್ನ ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ಗೆ ಹಸ್ತಾಂತರಿಸಿತು. ಸುಮಾರು 69 ವರ್ಷಗಳ ನಂತರ ಟಾಟಾ ಸಮೂಹ ವಿಮಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಇದನ್ನೂ ಓದಿ: ಅಧಿಕೃತವಾಗಿ 'ಟಾಟಾ ಗ್ರೂಪ್‌' ತೆಕ್ಕೆಗೆ ಬಿದ್ದ ಏರ್‌ ಇಂಡಿಯಾ

ಶುಕ್ರವಾರ ಹೊರಡುವ ಪ್ರತಿ ವಿಮಾನದಲ್ಲಿ ಬಾಗಿಲು ಮುಚ್ಚಿದ ನಂತರ ನಿರ್ದಿಷ್ಟ ಘೋಷಣೆಯನ್ನು ಮಾಡಲು ಏರ್‌ಲೈನ್‌ನ ಪೈಲಟ್‌ಗಳಿಗೆ ಕಾರ್ಯಾಚರಣೆ ವಿಭಾಗವು ತಿಳಿಸಿದೆ ಎಂದು ಆದೇಶದಲ್ಲಿದೆ.

ಆದೇಶದ ಪ್ರಕಾರ, ಪ್ರಕಟಣೆಯು ಕೆಳಕಂಡಂತಿರುತ್ತದೆ:

"ಆತ್ಮೀಯ ಅತಿಥಿಗಳೇ, ಇದು ನಿಮ್ಮ ಕ್ಯಾಪ್ಟನ್ (ಹೆಸರು) ಮಾತನಾಡುತ್ತಿದ್ದಾರೆ........ ವಿಶೇಷ ಘಟನೆಯ ಪ್ರತೀಕವಾಗಿರುವ ಈ ಐತಿಹಾಸಿಕ ವಿಮಾನಕ್ಕೆ ಸುಸ್ವಾಗತ. ಇಂದು, ಏಳು ದಶಕಗಳ ನಂತರ ಏರ್ ಇಂಡಿಯಾ ಅಧಿಕೃತವಾಗಿ ಟಾಟಾ ಗ್ರೂಪ್‌ನ ಭಾಗವಾಗಿದೆ. ಪ್ರತಿ ಏರ್ ಇಂಡಿಯಾ ವಿಮಾನದಲ್ಲಿ ನವೀಕೃತ ಬದ್ಧತೆ ಮತ್ತು ಉತ್ಸಾಹದಿಂದ ನಿಮಗೆ ಸೇವೆ ಸಲ್ಲಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಆದೇಶದ ಪ್ರಕಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ಏರ್ ಇಂಡಿಯಾದ ಭವಿಷ್ಯಕ್ಕೆ ಸುಸ್ವಾಗತ! ನೀವು ಪ್ರಯಾಣವನ್ನು ಆನಂದಿಸುತ್ತೀರಿ ಎಂದು ನಾವು ಭಾವಿಸುತ್ತೇವೆ. ಧನ್ಯವಾದಗಳು’’ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News