ಅಡ್ಡೂರು ಸಹರಾ ಶಾಲೆಯ 18 ಮಕ್ಕಳಿಗೆ ಕರಾಟೆ ಪ್ರಶಸ್ತಿ

Update: 2022-01-28 15:59 GMT

ಗುರುಪುರ, ಜ.28: ಮೂಡಬಿದಿರೆ ಸಮಾಜ ಸೇವಾ ಕಲ್ಯಾಣ ಮಂದಿರದಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಶಾಲೆಯ 21 ವಿದ್ಯಾರ್ಥಿಗಳ ಪೈಕಿ 18 ಮಂದಿ ವಿಶಿಷ್ಟ ಬಹುಮಾನ ಗಳಿಸಿದ್ದಾರೆ.

ಅಹ್ಮದ್ ಶಹಲ್ (6ನೇ ತರಗತಿ) ಪ್ರಥಮ ಸ್ಥಾನ, ಧನುಷ್(6ನೇ ತರಗತಿ) ಮತ್ತು ಮುಹಮ್ಮದ್ ರಿಹಾನ್(8ನೇ ತರಗತಿ) ದ್ವಿತೀಯ ಸ್ಥಾನ ಹಾಗೂ ಮುಹಮ್ಮದ್ ರಿಝಾನ್ (2ನೇ ತರಗತಿ), ಧನ್ಯಾ (3ನೇ ತರಗತಿ), ಮುಹಮ್ಮದ್ ಮುಝಮ್ಮಿಲ್, ಶೇಖ್ ಮುಹಮ್ಮದ್ ಮುಝಮ್ಮಿಲ್, ಜೀವಿತ್, ನಹೀಂ, ನಶಾತ್ ಆದಿಲ್, ಮೊಯ್ಯಿದ್ದೀನ್ ಹಸನ್ ಶನಫ್, ಫಾಹಿಕ್, ಶೇಖ್ ಮುಹಮ್ಮದ್ ಇಶಾಂ (4ನೇ ತರಗತಿ), ರಾಝಿ, ರಿಹಾ ಫಾತಿಮಾ, ಮರಿಯಮ್ಮ ಅನಿಷಾ (6ನೇ ತರಗತಿ), ಮುಹಮ್ಮದ್ ಫಾಹೀಂ (7ನೇ ತರಗತಿ), ಮುಹಮ್ಮದ್ ಅದ್ನಾನ್ (8ನೇ ತರಗತಿ) ತೃತೀಯ ಸ್ಥಾನ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News