ಭಾಗವತ ಮಯ್ಯರಿಗೆ ಶ್ರೀಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ

Update: 2022-01-28 16:23 GMT

ಕಾರ್ಕಳ, ಜ.28: ಬಡಗುತಿಟ್ಟಿನ ಮೇರು ಕಲಾವಿದ ರಾಘವೇಂದ್ರ ಮಯ್ಯ ಹಾಲಾಡಿಗೆ ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಸಂದರ್ಭ ಶ್ರೀ ಕುಂದೇಶ್ವರ ಸಮ್ಮಾನ್-2022 ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಅಭಿನಂದಿಸಿ ಮಾತನಾಡಿದರು. ಯಕ್ಷಗುರು ಕದ್ರಿ ರಾಮಚಂದ್ರ ಭಟ್ ಎಲ್ಲೂರು, ಗಂಗಾ ಆರ್.ಭಟ್, ಧರ್ಮದರ್ಶಿ ಕೃಷ್ಣ ರಾಜೇಂದ್ರ ಭಟ್, ವೇದಮೂರ್ತಿ ರವೀಂದ್ರ ಭಟ್, ಸುಧೀಂದ್ರ ಭಟ್, ಸುಜ್ಞೇಂದ್ರ ಭಟ್, ರೆಂಜಾಳ ಸೋದೆ ಮಠದ ಧರ್ಮದರ್ಶಿ ಸುಬ್ರಹ್ಮಣ್ಯ ಭಟ್, ಕುಂಜತ್ತೋಡಿ ವಾಸುದೇವ ಭಟ್ ಕದ್ರಿ, ಪ್ರಗತಿಪರ ಕೃಷಿಕ ಸತೀಶ್ ಭಟ್, ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಉದ್ಯಮಿ ಸಂತೋಷ್ ಕುಮಾರ್ ಜೈನ್ ರೆಂಜಾಳ, ಪಲ್ಲವಿ ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ಭೂ ದಾನಿಗಳಿಗೆ ಸನ್ಮಾನ: ದೇವಸ್ಥಾನ ಮತ್ತು ಊರಿನ ಸಂಪರ್ಕ ರಸ್ತೆಗಾಗಿ ಭೂಮಿಯನ್ನು ನೀಡಿದ ಥಾಮಸ್, ಗ್ರೀಗೊರಿ ವಾಸ್ ಅವರ ಪುತ್ರ ವಿನ್ಸಂಟ್, ಭಂಡಾರಿ ಮನೆತನದ ಪರವಾಗಿ ಸುರೇಶ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಸಿರಿಯಣ್ಣ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ರತ್ನಾಕರ ರಾವ್, ಗಂಗಮ್ಮ, ಯುವ ಉದ್ಯಮಿ ಸತೀಶ್ ಭಟ್ ಕುಂದೇಶ್ವರ ದಾನಿಗಳನ್ನು ಅಭಿನಂದಿಸಿದರು. ರವೀಂದ್ರ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News